ಬೆಂಗಳೂರು: ರಾಜ್ಯ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಯಾವ ಪಕ್ಷಗಳಿಗೂ ಸಂಪೂರ್ಣ ಬಹುಮತ ಸಿಗದೇ ಅಂತತ್ರ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಪ್ರಚಲಿತ ವಿದ್ಯಾಮಾನಗಳಿಗೆ ಬಹುಬೇಕ ಪ್ರತಿಕ್ರಿಯಿಸುವ ಜತೆಗೆ ಟ್ರೋಲ್ ಮಾಡುವ ಸಾಮಾಜಿಕ ಜಾಲತಾಣದಲ್ಲಿ ಈ ಚುನಾವಣಾ ಅತಂತ್ರ ಫಲಿತಾಂಶ ಕುರಿತು ಹಾಸ್ಯ, ವ್ಯಂಗ್ಯ ಹಾಗೂ ಕೆಣಕುವಂತಹ ಸಾಕಷ್ಟು ಟ್ರೋಲ್‌ಗಳು ಹರಿದಾಡುತ್ತಿದ್ದು ಅವುಗಳಲ್ಲಿ ಆಯ್ದ ಕೆಲವು.
1.ಕರ್ನಾಟಕ ಜನ ವಿಶಾಲ ಹೃದಯದವರು. ನಾನು ಸಿ.ಎಂ.ಆಗಬೇಕು ಎಂಬ ಕುಮಾರಣ್ಣನ ಆಸೆಯನ್ನು, ಹೆಚ್ಚು ಕ್ಷೇತ್ರ ಗೆಲ್ಲಬೇಕು ಎಂಬ ಬಿಜೆಪಿ ಆಸೆಯನ್ನು, ಮುಂದಿನ ಬಾರಿ ಅಧಿಕಾರ ಬರಬೇಕು ಎಂಬ ಕಾಂಗ್ರೆಸ್ ಆಸೆಯನ್ನೂ ಹೀಡೇರಿಸುವ ಮೂಲಕ ಯಾವ ಪಕ್ಷಕ್ಕೂ ರಾಜ್ಯದ ಜನರು ನೋವು ಮಾಡಿಲ್ಲ.
2. ದೇವಗೌಡ್ರು- ನನ್ನ ಮಗನ್ನು ಸಿ.ಎಂ ಮಾಡೋಕೆ ಕಳೆದ 6-7 ತಿಂಗಳಿಂದ ಕಷ್ಟ ಪಟ್ಟ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಧನ್ಯವಾದಗಳು.
3. ಎರಡು ಕನಸು ಈ ಸಲ ಸರ್ಕಾರ ನಮ್ದೆ- ಯಡಿಯೂರಪ್ಪ, ಈ ಸಲ ಕಪ್ ನಮ್ದೆ – ಆರ್‌ಸಿಬಿ.
4. ಪಟಾಕಿ, ಸುರ್ ಸುರ್ ಬತ್ತಿ, ಬಾಂಬ್ ಎಲ್ಲವೂ ಬಿಜೆಪಿ ಹಾಗೂ ಕಾಂಗ್ರೆಸ್‌ನದ್ದು ಅಂಟಿಸುವುದು ಮಾತ್ರ ನಮ್ ಕುಮಾರಣ್ಣ, ಗೆಲುವು ಯಾರೆª ಆಗಿರ್ಲಿ ಸಿಎಂ ಮಾತ್ರ ಕುಮಾರಣ್ಣ.
5 ಸರ್ಕಾರ ಬದಲಿಸಿ, ಬಿಜೆಪಿ ಎಂಬ ಪ್ರಧಾನಿ ಮೋದಿ ಮಾತು ಈಡೇರಿಸಿದ ರಾಜ್ಯದ ಜನರು. ಸರ್ಕಾರವನ್ನೂ ಬದಲಿಸಿದ್ದಾರೆ, ಬಿಜೆಪಿಯಲ್ಲಿ ಗೆಲ್ಲಿಸಿದ್ದಾರೆ.
6 ಎಲ್ಲರಿಗೂ ಬೇಕು ಕುಮಾರಣ್ಣ. ಅನಿತಾಗೂ ಬೇಕು, ರಾಧಿಕಾಗೂ ಬೇಕು, ಈಗ ಕಮಲ ಹಾಗೂ ಕೈಗೂ ಬೇಕು ಕುಮಾರಣ್ಣ.
7 ಸೋತವರೆಲ್ಲ ಒಂದಾಗಿ ಸರ್ಕಾರ ನಡೆಸುತ್ತೀವಿ ಎಂದರೆ, ಎಲೆಕ್ಷನ್ ಯಾಕ್ರೋ ಮಾಡ್ತೀರಾ, ಸುಮ್ನೆ ಟಾಸ್ ಹಾಕಿ ಅಧಿಕಾರ ಕೊಡಬಹುದಿತ್ತಲ್ವಾ?
8. ನಮ್ ಕಡೆ ಡಿಕ್ಟಿಕ್ಷನ್ ಬಂದವರಿಗಿಂತ ಜಸ್ಟ್ ಪಾಸ್ ಆದವರಿಗೆ ಬೆಲೆ ಜಾಸ್ತಿ ಅದಕ್ಕೆ ಉದಾಹರಣೆ ಎಂದ್ರೆ ನಮ್ ಕುಮಾರಣ್ಣ.
Comments are closed.