ಕರ್ನಾಟಕ

ಕಾಂಗ್ರೆಸ್ ಹೈಕಮಾಂಡ್ ದೇವೇಗೌಡರೊಂದಿಗೆ ಫಲಿತಾಂಶ ಬರುವ ಮೊದಲೇ ಒಂದು ಹಂತದ ಚರ್ಚೆ ನಡೆಸಿತ್ತು!

Pinterest LinkedIn Tumblr


ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗುವುದು ಖಚಿತವಾಗುತ್ತಿದ್ದಂತೆ, ಕಾಂಗ್ರೆಸ್ ಹೈಕಮಾಂಡ್ ಜೆಡಿಎಸ್ ವರಿಷ್ಠ ದೇವೇಗೌಡರೊಂದಿಗೆ ಫಲಿತಾಂಶ ಬರುವ ಮೊದಲೇ ಒಂದು ಹಂತದ ಚರ್ಚೆ ನಡೆಸಿದರೆ, ಬಿಜೆಪಿ ಬಹುಮತದ ವಿಶ್ವಾಸದಲ್ಲಿ ಮೈಮರೆತು ಬಳಿಕ ಪಶ್ಚಾತಾಪ ಪಡುವಂತಾಗಿದೆ.

ಸೋಮವಾರ ತಡರಾತ್ರಿ ಜೆಡಿಎಸ್ ವರಿಷ್ಠ ದೇವೇಗೌಡರೊಂದಿಗೆ, ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಚರ್ಚಿಸಿದ್ದು, ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ, ಯಾವ ರೀತಿ ರಚಿಸಬೇಕೆನ್ನುವ ಬಗ್ಗೆ ಚರ್ಚಿಸಿದ್ದಾರೆ. ಯಾವುದೇ ಕಾರಣಕ್ಕೂ ಬಿಜೆಪಿ ಅಧಿಕಾರದ ಗದ್ದುಗೆ ಏರಲು ಬಿಡಬಾರದು ಎಂದು ನಿರ್ಧರಿಸಿದ ಕಾಂಗ್ರೆಸ್ ಹೈಕಮಾಂಡ್ ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲು ಒಪ್ಪಿಗೆ ಸೂಚಿಸಿತ್ತು ಎಂದು ತಿಳಿದುಬಂದಿದೆ.

ಚುನಾವಣಾ ಸಮೀಕ್ಷೆಗಳು ಅತಂತ್ರ ಫಲಿತಾಂಶದ ಬಗ್ಗೆ ಲೆಕ್ಕ ಹಾಕಿದ್ದ ಕಾಂಗ್ರೆಸ್, ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳುವ ಜವಾಬ್ದಾರಿಯನ್ನು ಗುಲಾಂ ನಬಿ ಆಜಾದ್, ಕೆ.ಸಿ ವೇಣುಗೋಪಾಲ್ ಹೆಗಲಿಗೆ ಹೈಕಮಾಂಡ್ ಹಾಕಿತ್ತು. ಎಚ್.ಡಿ ಕುಮಾರಸ್ವಾಮಿ ಸಿಂಗಾಪುರಕ್ಕೆ ಹಿನ್ನೆಲೆಯಲ್ಲಿ ದೇವೇಗೌಡರೊಂದಿಗೆ ಚರ್ಚಿಸಿ, ಕಾಂಗ್ರೆಸ್‌ನೊಂದಿಗೆ ಸಮಿಶ್ರ ಸರಕಾರ ರಚಿಸಲು ಒಪ್ಪಿಗೆ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ, ದೇವೇಗೌಡರು ಮುಖ್ಯಮಂತ್ರಿ ಸ್ಥಾನ ಹಾಗೂ ಕೆಲ ಪ್ರಮುಖ ಖಾತೆಗಳನ್ನು ನೀಡಿದರೆ ಮಾತ್ರ ಮೈತ್ರಿ ಮಾಡಿಕೊಳ್ಳಲು ಒಪ್ಪುವುದಾಗಿ ಹೇಳಿದ್ದರು ಎಂದು ತಿಳಿದುಬಂದಿದೆ.

ಬುಧವಾರ ಬೆಳಗ್ಗೆ ಫಲಿತಾಂಶದ ಟ್ರೆಂಡ್ ನೋಡುತ್ತಿದ್ದಂತೆ ಜೆಡಿಎಸ್ ಆಫರ್ ಒಪ್ಪಿಕೊಂಡಿರುವ ಕಾಂಗ್ರೆಸ್ ಹೈಕಮಾಂಡ್, ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನ ಹಾಗೂ ಕಾಂಗ್ರೆಸ್‌ಗೆ ಉಪಮುಖ್ಯಮಂತ್ರಿ ಸ್ಥಾನ ಹಂಚಿಕೊಂಡು ಸರಕಾರ ರಚಿಸಲು ರಾಜಭವನದತ್ತ ಹೆಜ್ಜೆ ಎಡವಟ್ಟು ಮಾಡಿಕೊಂಡ ಬಿಜೆಪಿ ಫಲಿತಾಂಶದಲ್ಲಿ ಬಿಜೆಪಿ ಬಹುಮತದತ್ತ ಮುನ್ನಡೆ ಕಾಯ್ದುಕೊಳ್ಳುತ್ತಿದ್ದಂತೆ, ಬಿಜೆಪಿ ನಾಯಕರು ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಸಾಧ್ಯತೆ ಬಗ್ಗೆ ಹೆಚ್ಚು ಗಮನ ಹರಿಸದೇ, ಕೇವಲ ತಮ್ಮ ಬಹುಮತದತ್ತ ಚಿತ್ತ ಹರಿಸಿದರು. ಆದರೆ, ಕಾಂಗ್ರೆಸ್ ಬಹುಮತ ಪಡೆಯದಿದ್ದರೂ, ಸರಕಾರ ರಚಿಸಲು ಇದ್ದ ಸಾಧ್ಯತೆಗಳ ಬಗ್ಗೆ ಚರ್ಚಿಸಿ ಸ್ವತಃ ಸೋನಿಯಾ ಗಾಂಧಿ ಅವರಿಂದ ದೇವೇಗೌಡರಿಗೆ ಕರೆ ಮಾಡಿ ಮೈತ್ರಿ ವಿಚಾರ ಪ್ರಸ್ತಾಪಿಸಿದ್ದಾರೆ.

2015ರಲ್ಲಿ ನಡೆದ ಬಿಬಿಎಂಪಿ ಚುನಾವಣೆಯಲ್ಲಿಯೂ, ಬಿಜೆಪಿ ಅತಿ ದೊಡ್ಡ ಬಂದಿದ್ದರೂ, ಜೆಡಿಎಸ್ ಜತೆ ಮಾತನಾಡದೇ ಹೋಗಿದ್ದರಿಂದ, ಬಿಬಿಎಂಪಿ ಅಧಿಕಾರಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಅಂದು ಬಿಬಿಎಂಪಿ ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದ ಆಶೋಕ್ ಎಡವಟ್ಟು ಮಾಡಿಕೊಂಡರೆ, ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಸೇರಿದಂತೆ ಬಹುತೇಕ ನಾಯಕರು ಎಡವಿದ್ದಾರೆ. ಮುಖ್ಯಮಂತ್ರಿ ಸ್ಥಾನದ ಆಫರ್ ನೀಡುತ್ತಿದ್ದಂತೆ ದೇವೇಗೌಡರು, ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿ ಮೈತ್ರಿ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಂತಿಮ ಹಂತ ತಲುಪುವ ವೇಳೆಗೆ ಬಿಜೆಪಿ ಜೆಡಿಎಸ್ ಬಾಗಿಲು ತಟ್ಟಿದರೂ, ಪ್ರಯೋಜನವಾಗಿಲ್ಲ.

Comments are closed.