ಕರ್ನಾಟಕ

3 ಲಕ್ಷಕ್ಕೂ ಅಧಿಕ ಮತದಾರರಿಂದ ನೋಟಾಕ್ಕೆ ಹಕ್ಕು ಚಲಾವಣೆ: ಫಲಿತಾಂಶವನ್ನೇ ಏರುಪೇರು ಮಾಡಿದ ಮತಗಳು

Pinterest LinkedIn Tumblr


ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನಸಭೆ ಫಲಿತಾಂಶ ಬಹುತೇಕ ಹೊರಹೊಮ್ಮಿದ್ದು, ಅತಂತ್ರ ಫಲಿತಾಂಶ ನಿರ್ಮಾಣವಾಗಿದೆ. ಅತಂತ್ರ ವಿಧಾನಸಭೆ ಫಲಿತಾಂಶಕ್ಕೆ ಹಲವು ಕಾರಣಗಳಿದ್ದು, ಈ ಪೈಕಿ ನೋಟಾ ಸಹ ಒಂದು ಎನ್ನಬಹುದು. ಮತದಾನ ಮಾಡಿರುವ ಪೈಕಿ 3 ಲಕ್ಷಕ್ಕೂ ಅಧಿಕ ಜನತೆ ತಮ್ಮ ಕ್ಷೇತ್ರದ ಎಲ್ಲ ಅಭ್ಯರ್ಥಿಗಳನ್ನು ತಿರಸ್ಕರಿಸಿ, ನೋಟಾ ಬಟನ್ ಒತ್ತಿರುವುದರಿಂದ ಹಲವು ಕ್ಷೇತ್ರಗಳ ಫಲಿತಾಂಶದಲ್ಲಿ ವ್ಯತ್ಯಾಸಕ್ಕೆ ಕಾರಣವಾಗಿರಲೂಬಹುದು.

ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶ ಬಹುತೇಕ ಹೊರಹೊಮ್ಮಿದ್ದು, ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ 100ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡಿದ್ದರೂ ಸಹ ಬಿಜೆಪಿಗಿಂತ ಕಾಂಗ್ರೆಸ್‌ನ ಶೇಕಡಾವಾರು ಮತಗಳಿಕೆ ಪ್ರಮಾಣ ಹೆಚ್ಚಾಗಿದೆ. ಅಲ್ಲದೆ, ಈ ಬಾರಿಯ ಚುನಾವಣೆಯಲ್ಲಿ ಲಕ್ಷಾಂತರ ಜನರು ನೋಟಾ ಮೊರೆ ಹೋಗಿರೋದು ಸಹ ವಿಧಾನಸಭೆಯ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ.

ಒಂದು ವೇಳೆ ನೋಟಾ ಇಲ್ಲದಿದ್ದರೆ, ರಾಜ್ಯದ ಫಲಿತಾಂಶ ಮತ್ತಷ್ಟು ವಿಭಿನ್ನವಾಗಿರುವ ಸಾಧ್ಯತೆ ಇತ್ತು. ಇನ್ನು, ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ ಹಾಗೂ ಸ್ವತಂತ್ರ ಅಭ್ಯರ್ಥಿಗಳನ್ನು ಹೊರತುಪಡಿಸಿದರೆ ನೋಟಾ ಪರ ಶೇ. 0.9 ರಷ್ಟು ಜನತೆ ಮೊರೆ ಹೋಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಐದನೇ ಸ್ಥಾನ ಪಡೆದುಕೊಂಡಿದೆ.

Comments are closed.