ಕರ್ನಾಟಕ

118 ಕೆಜಿಯ ಸಾಫ್ಟ್‌ವೇರ್‌ ಉದ್ಯೋಗಿ 4 ತಿಂಗಳಿನಲ್ಲಿ 20 ಕೆಜಿ ತೂಕ ಕಳೆದುಕೊಂಡಿದ್ದು ಹೇಗೆ?

Pinterest LinkedIn Tumblr


ಟಿಸಿಎಸ್‌ ಸಾಫ್ಟ್‌ವೇರ್‌ ಉದ್ಯೋಗಿ ಜಗದೀಶ್‌ ಗದ್ದೆ ನಾಲ್ಕು ತಿಂಗಳಿನಲ್ಲಿ ಬೊಜ್ಜು ಕರಗಿಸಿ ಸದೃಢವಾದ ಮೈಕಟ್ಟನ್ನು ಪಡೆಯುವಲ್ಲಿ ಹೇಗೆ ಯಶಸ್ವಿಯಾದೆ ಎಂಬ ಸೀಕ್ರೆಟ್‌ ಹಂಚಿಕೊಂಡಿದ್ದಾರೆ ನೋಡಿ:

ಹೆಸರು: ಜಗದೀಶ್ ಗದ್ದೆ
ವೃತ್ತಿ: ಟಿಸಿಎಸ್‌ನಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌
ವಯಸ್ಸು: 22
ಕಳೆದುಕೊಂಡ ತೂಕ: 20.4 ಕೆಜಿ

ತೆಗೆದುಕೊಂಡ ಸಮಯ: 4 ತಿಂಗಳು
ಮೊದಲು ಇದ್ದ ತೂಕ:118.6ಕೆಜಿ
ಲೈಫ್‌ನಲ್ಲಿ ಟರ್ನಿಂಗ್‌ ಪಾಯಿಂಟ್‌: ನಾನು ನನ್ನ ತೂಕದ ಬಗ್ಗೆ ಅಷ್ಟೇನು ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಫ್ರೆಂಡ್ಸ್‌ ಹಾಗೂ ಮನೆಯವರು ನನ್ನ ತೂಕದ ಬಗ್ಗೆ ತಮಾಷೆ ಮಾಡುತ್ತಿದ್ದರು. ಅವರ ಟೀಕೆಯನ್ನು ಸವಾಲಾಗಿ ಸ್ವೀಕರಿಸಿ ತೂಕ ಕಮ್ಮಿಯಾಗಬೇಕೆಂದು ನಿರ್ಧರಿಸಿದೆ.

ನನ್ನ ಬ್ರೇಕ್‌ ಫಾಸ್ಟ್: ಒಂದು ಲೋಟ ಬಿಸಿ ನೀರಿಗೆ ಜೇನು ಹಾಗೂ ನಿಂಬೆ ರಸ ಹಾಗೂ ಸ್ವಲ್ಪ ನಟ್ಸ್. ಜಿಮ್‌ಗೆ ಹೋಗಿ ಬಂದ ಬಳಿಕ 6 ಮೊಟ್ಟೆಯ ಬಿಳಿ ಅಥವಾ ಓಟ್‌ಮೀಲ್ಸ್.
ಲಂಚ್: ಎರಡು ಮೊಟ್ಟೆ ಹಾಕಿದ ಸ್ಯಾಂಡ್‌ವಿಚ್‌ ಅಥವಾ 2 ರೊಟ್ಟಿ
ಸ್ನ್ಯಾಕ್ಸ್‌: ತರಕಾರಿ ಸಲಾಡ್‌
ಡಿನ್ನರ್: ಮೊಳಕೆ ಬರಿಸಿದ ಕಾಳುಗಳು ಮತ್ತು 2 ರೊಟ್ಟಿ ಅಥವಾ 1 ಲೋಟ ಜ್ಯೂಸ್‌

ರುಚಿ ತಿನಿಸು ತಿನ್ನಲು ಬಯಕೆ ಆದ ದಿನ, ಆಫೀಸ್‌ ಪಾರ್ಟಿ ದಿನ
ಆಫೀಸ್ ಪಾರ್ಟಿ ಇರುವಾಗ ಡಯಟ್‌ಗೆ ಮೋಸ ಮಾಡುತ್ತಿದ್ದೆ. ಆ ದಿನ ಗ್ರಿಲ್ಡ್‌ ಚಿಕನ್, ಗಾರ್ಲಿಕ್ ನಾನ್‌ ತಿನ್ನುತ್ತಿದ್ದೆ. ಆದರೆ ಅನ್ನದ ಐಟಂ ಮುಟ್ಟುತ್ತಿರಲಿಲ್ಲ.

ವ್ಯಾಯಾಮ:4 ದಿನ ಕಾರ್ಡಿಯೋ ಮತ್ತು ಎರಡು ದಿನ ವೇಟ್‌ ಟ್ರೈನಿಂಗ್
ಕಡಿಮೆ ಕ್ಯಾಲೋರಿಯ ರೆಸಿಪಿ: ಬ್ರೌನ್‌ ರೆಸಿಪಿ ಹಾಗೂ ಫ್ರೈ ಮಾಡಿದ ಮೊಟ್ಟೆ
ಫಿಟ್‌ನೆಸ್‌ ಸೀಕ್ರೆಟ್‌
3 ಕಿಮೀ ಓಡುವುದು ಹಾಗೂ ನಡೆಯುವುದು ಅಥವಾ ಸೈಕಲ್‌ ತುಳಿಯುವುದು ಇವುಗಳ ಜತೆ ಪುಶ್‌ ಅಪ್‌ ಮಾಡುತ್ತಿದ್ದೆ.

ನನಗೆ ಸ್ಪೂರ್ತಿ ತುಂಬುತ್ತಿದ್ದವರು: ನನ್ನ ಟ್ರೈನರ್ ನನಗೆ ತುಂಬಾ ಸ್ಪೂರ್ತಿ ತುಂಬುತ್ತಿದ್ದರು. ಅವರು ಯಾವತ್ತೂ ನನ್ನ ಮೇಲೆ ಒತ್ತಡ ಹಾಕುತ್ತಿರಲಿಲ್ಲ. ಅಲ್ಲದೆ ಜೂ. ಎನ್‌ಟಿಆರ್, ಒಂದು ಕಾಲದಲ್ಲಿ ಅವರು ತುಂಬಾ ದಪ್ಪವಿದ್ದರ, ಈಗ ಅವರ ಮೈಕಟ್ಟು ನೋಡಿದರೆ ನಾನೂ ತೆಳ್ಳಗಾಗಬೇಕು ಎಂಬ ಸ್ಪೂರ್ತಿ ಉಂಟಾಗುತ್ತಿತ್ತು.

ಅಲ್ಲದೆ ದಪ್ಪಗಿದ್ದಾಗ ಕೇಳಿ ಬರುತ್ತಿದ್ದ ಟೀಕೆಗಳನ್ನು ನೆನಪಿಸಿಕೊಂಡರೆ ಬೊಜ್ಜು ಕರಗಿಸಲೇಬೇಕೆಂಬ ಹಠ ಮೂಡುತ್ತಿತ್ತು.
ಮುಂದೆ ಯಾರ ರೀತಿ ಮೈಕಟ್ಟು ಬೇಕೆಂದು ಕೇಳಿದರೆ ರಾಣಾ ದಗ್ಗುಬಾಟಿ ಎಂದು ಹೇಳುತ್ತೇನೆ.

ಬದಲಾದ ಲೈಫ್‌ಸ್ಟೈಲ್‌
ಹೊರಗಡೆಯಿಂದ ತಿನ್ನುವುದನ್ನು ಸ್ಟಾಪ್‌ ಮಾಡಿದೆ.

ತೂಕ ಕಮ್ಮಿಯಾದ ಬಳಿಕ ನನ್ನ ಜೀವನ: ಸದೃಢವಾದ ಮೈಕಟ್ಟು ನೋಡುವಾಗ ನನಗೆ ಖುಷಿ ಆಗುತ್ತದೆ. ನನ್ನಲ್ಲಿ ಹೊಸ ವ್ಯಕ್ತಿಯನ್ನು ಕಂಡಿದೆ.

Comments are closed.