
ಕೇರಳ: ಅಪ್ರಾಪ್ತ ಮಗಳನ್ನು ಪರಪುರುಷ ಲೈಂಗಿಕವಾಗಿ ಬಳಸಿಕೊಳ್ಳುವುದಕ್ಕೆ ಸಹಕರಿಸಿದ ತಾಯಿಯನ್ನು ಭಾನುವಾರ ಪೊಲಿಸರು ಬಂಧಿಸಿದ್ದಾರೆ.
ಮಲಪ್ಪುರಂ ಜಿಲ್ಲೆಯಲ್ಲಿ ಸಿನಿಮಾ ಹಾಲ್ನಲ್ಲಿ ಘಟನೆ ನಡೆದಿದ್ದು ಬಿಜಿನೆಸ್ಮೆನ್ ಮೊಯಿದೀನ್ ಕುಟ್ಟಿ ಪ್ರಮುಖ ಆರೋಪಿಯಾಗಿದ್ದು ಆತನನ್ನು ಶುಕ್ರವಾರವೇ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮೊಯಿದೀನ್ ಕುಟ್ಟಿ ಹಾಗೂ ಅಪ್ರಾಪ್ತೆಯ ತಾಯಿ ಇಬ್ಬರ ವಿರುದ್ಧವೂಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಸಿನಿಮಾ ಹಾಲ್ನಲ್ಲಿ ಆತ ನಡೆಸುತ್ತಿದ್ದ ಕೃತ್ಯವನ್ನು ನೋಡಿದವರೊಬ್ಬರು ಥಿಯೇಟರ್ ಮಾಲೀಕರಿಗೆ ವಿಷಯ ತಿಳಿಸಿದ್ದಾರೆ. ಅವರು ಸಿಸಿಟಿವಿ ಪರಿಶೀಲನೆ ನಡೆಸಿ ನಂತರ ಶಿಶು ಕಲ್ಯಾಣ ಇಲಾಖೆ ಅಧಿಕಾರಿಗಳು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನೆ ಏ.18ಕ್ಕೆ ನಡೆದಿದ್ದರೂ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ವಿಳಂಬ ಮಾಡಿದರು. ಆದರೆ, ಶನಿವಾರ ಮಾಧ್ಯಮಗಳು ಪ್ರಸಾರ ಮಾಡಿ ಟೀಕಿಸಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಳ್ಳಲು ತಾಯಿಯ ಸಮ್ಮತಿ ಇತ್ತು ಎಂಬುದು ಪ್ರಾಥಮಿಕ ತನಿಖೆಯಲ್ಲೇ ಅರ್ಥವಾಗುತ್ತದೆ ಎಂದು ಕೇರಳಾ ಮಹಿಳಾ ಆಯೋಗದ ಅಧ್ಯಕ್ಷೆ ಎಂ.ಸಿ.ಜೋಸೆಫೀನ್ ತಿಳಿಸಿದ್ದಾರೆ. ಆಕೆ ಮೇಲೆ ಶೋಷಣೆಯಾಗಿದ್ದರೂ ಕ್ರಮ ವಹಿಸಲು ವಿಳಂಬ ಮಾಡಿದ ಪೊಲೀಸರ ಕ್ರಮ ತೀವ್ರ ಟೀಕೆಗೆ ಗುರಿಯಾದ ಹಿನ್ನೆಲೆಯಲ್ಲಿ ಸಬ್ ಇನ್ಸ್ಪೆಕ್ಟರ್ ಚಂಗರಮಕುಲಂ ಸಸ್ಪೆಂಡ್ ಆಗಿದ್ದಾರೆ. ಹಾಗೇ ಪ್ರಕರಣ ತನಿಖೆಗೆ ವಿಳಂಬ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಮಾನವ ಹಕ್ಕುಗಳ ಆಯೋಗ ಆದೇಶ ನೀಡಿದೆ ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಪೊಲೀಸರಿಗೆ ಹೇಳಿಕೆ ನೀಡಿರುವ ಬಾಲಕಿ, ತಾನು ಆತನಿಂದ ಲೈಂಗಿಕ ಶೋಷಣೆಗೆ ಒಳಗಾಗಿದ್ದು ಇದೇ ಮೊದಲ ಬಾರಿಯಲ್ಲ ಎಂದಿದ್ದಾಳೆ. ಆಕೆಯನ್ನು ವೈದ್ಯಕೀಯ ಚಿಕಿತ್ಸೆಗೆ ದಾಖಲಿಸಲಾಗಿದೆ.
ಬಂಧಿತ ಕುಟ್ಟಿ ಲಾಡ್ಜ್ ಮಾಲೀಕನಾಗಿದ್ದು ಜ್ಯುವೆಲರಿ ಶಾಪ್, ರೆಸ್ಟೋರೆಂಟ್ಗಳನ್ನೂ ಹೊಂದಿದ್ದಾನೆ. ತಾಯಿ, ಮಗಳು ಆತನ ಲಾಡ್ಜ್ ಒಂದರ ರೂಂನಲ್ಲಿ ಇದ್ದರು ಎನ್ನಲಾಗಿದೆ.
Comments are closed.