ಕರ್ನಾಟಕ

ಚನ್ನಪಟ್ಟಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್‌ಗೆ ಸೋಲಿನ ಭೀತಿ

Pinterest LinkedIn Tumblr


ಚೆನ್ನಪಟ್ಟಣ: ಭಾರೀ ಜಿದ್ದಾಜಿದ್ದಿನ ಕಣವಾಗಿರುವ ಚನ್ನಪಟ್ಟಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್‌ ಅವರು ಫ‌ಲಿತಾಂಶಕ್ಕೂ ಮುನ್ನ ಸೋಲಿನ ಭೀತಿಗೆ ಒಳಗಾಗಿದ್ದಾರೆ.

ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿ.ಪಿ.ಯೋಗೇಶ್ವರ್‌ ಕ್ಷೇತ್ರದಲ್ಲಿ ನನ್ನ ಗೆಲುವು ಕಷ್ಟ. ಸಚಿವ ಡಿ.ಕೆ.ಶಿವಕುಮಾರ್‌ ಅವರು ಹಣದ ಹೊಳೆ ಹರಿಸಿದ್ದಾರೆ. ಅವರ ಕಪ್ಪು ಹಣದ ಎದುರು ನನ್ನ ಗೆಲುವು ಕಷ್ಟ ಎಂದಿದ್ದಾರೆ.

ನನ್ನ ನೇರ ಸ್ಪರ್ಧಿ ಎಚ್‌.ಡಿ.ಕುಮಾರಸ್ವಾಮಿ ಆಗಿದ್ದರು, ಆದರೆ ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ಪರ ಡಿ.ಕೆ.ಶಿವಕುಮಾರ್‌ ಅವರು ಕಪ್ಪು ಹಣ ಹಂಚಿ ಭಾರೀ ತಂತ್ರಗಳನ್ನು ರೂಪಿಸಿದ್ದಾರೆ ಎಂದು ಆರೋಪಿಸಿದರು.

ಡಿಕೆ ಬ್ರದರ್ಸ್‌ ಚುನಾವಣೆಯ 3 ದಿನಗಳ ಮುನ್ನ ನನ್ನ ಪರವಿದ್ದ ಮುಖಂಡರನ್ನು ಲಕ್ಷಾಂತರ ರೂಪಾಯಿ ನೀಡಿ ತಮ್ಮತ್ತ ಸೆಳೆದಿದ್ದಾರೆ. ಹೀಗಾಗಿ ನಮಗೆ ಸ್ವಲ್ಪ ಹಿನ್ನಡೆಯಾಗಿದೆ ಎಂದರು.

ಡಿಕೆ ಬ್ರದರ್ಸ್‌ ಸುಪಾರಿ ಕಿಲ್ಲರ್ಸ್‌ ಆದರೆ ರೇವಣ್ಣ ಸುಪಾರಿ ಕಿಲ್ಲರ್‌. ಅವರ ಹಣ ಬಲದ ನಡುವೆಯೂ ನಾನು ಮಾಡಿದ ಅಭಿವೃದ್ಧಿ ಕೆಲಸಗಳು ನನ್ನ ಅಲ್ಪ ಮತಗಳ ಅಂತರದ ಗೆಲುವಿಗೆ ಕಾರಣವಾಗಬಹುದು. ನಾನು ಬೇರೆ ಪಕ್ಷದಲ್ಲಿದ್ದರೆ ಸುಲಭ ಗೆಲುವು ಸಾಧಿಸುತ್ತಿದ್ದೆ ಎಂದರು.

ಸೋಲು ಗೆಲುವು ಏನೇ ಬಂದರೂ ನಾನು ಸಮಾನವಾಗಿ ಸ್ವೀಕರಿಸುತ್ತೇನೆ ಎಂದು ಯೋಗೇಶ್ವರ್‌ ಹೇಳಿದರು.

Comments are closed.