ಕರ್ನಾಟಕ

ಮೂಲಸೌಕರ್ಯಕ್ಕೆ ಒತ್ತಾಯಿಸಿ ಚಿಕ್ಕಬಳ್ಳಾಪುರದ 2 ಗ್ರಾಮಗಳಲ್ಲಿ ಮತದಾನ ಬಹಿಷ್ಕಾರ

Pinterest LinkedIn Tumblr


ಚಿಕ್ಕಬಳ್ಳಾಪುರ: ಜಿಲ್ಲೆಯ ಎರಡು ಗ್ರಾಮಗಳಲ್ಲಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುಡಿಬಂಡೆ ಪಟ್ಟಣ ಹಾಗೂ ಬಾಗೇಪಲ್ಲಿ ತಾಲೂಕಿನ ಗುಂಚೂರಪಲ್ಲಿ ಗ್ರಾಮಗಳಲ್ಲಿ ಮೂಲಸೌಕರ್ಯ ಒದಗಿಸಿಲ್ಲ ಎಂದು ಆರೋಪಿಸಿ ಮತದಾನ ಬಹಿಷ್ಕರಿಸಿದ್ದಾರೆ. ಈ ಬಗ್ಗೆ ಎಷ್ಟೋ ಬಾರಿ ಆಡಳಿತದ ಗಮನಕ್ಕೆ ತಂದಾಗ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಆದರೆ ಇದುವರೆಗೂ ಮೂಲಸೌಕರ್ಯ ನೀಡಿಲ್ಲ. ಹಾಗಾಗಿ ಮತದಾನ ಮಾಡುವುದಿಲ್ಲ ಎಂದಿದ್ದಾರೆ.

ಕೆಟ್ಟು ನಿಲ್ಲುವ ಮತಯಂತ್ರ

ಚೆಳೂರಿನ ರಾಮೋಜಿಪಲ್ಲಿಯಲ್ಲಿ ಬೆಳಗ್ಗೆಯಿಂದ ಮತಯಂತ್ರಗಳು ಕೆಟ್ಟುನಿಲ್ಲುತ್ತಿವೆ. ಮತದಾರರೂ ಗೊಂದಲ ಉಂಟುಮಾಡುತ್ತಿದ್ದಾರೆ. ನೀಲಿಗುಂಡಿ ಒತ್ತುವ ಬದಲು ಕೆಂಪುಗುಂಡಿ ಒತ್ತುತ್ತಿದ್ದರಿಂದ ಪದೇಪದೆ ಯಂತ್ರಗಳು ಹಾಳಾಗುತ್ತಿವೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

Comments are closed.