ಕರ್ನಾಟಕ

ಈ ಹಿಂದಿನ ಚುನಾವಣೆಯಲ್ಲಿ ನಿಖರ ಭವಿಷ್ಯ ನುಡಿದಿದ್ದ ಟುಡೇಸ್ ಚಾಣಕ್ಯ ಸಮೀಕ್ಷೆಯಲ್ಲಿ ಯಾರಿಗೆ ಬಹುಮತ ಸಿಗಲಿದೆ ಗೊತ್ತೇ…?

Pinterest LinkedIn Tumblr

 

ಬೆಂಗಳೂರು: 2014ರ ಲೋಕಸಭಾ ಚುನಾವಣೆಯಲ್ಲಿ ನಿಖರ ಭವಿಷ್ಯ ನುಡಿದಿದ್ದ ಟುಡೇಸ್ ಚಾಣಕ್ಯ ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ 120 ಸ್ಥಾನ ಗೆಲ್ಲಲಿದೆ ಎಂದು ತಿಳಿಸಿದೆ.

ಬಿಜೆಪಿ 120 ± 11 ಸ್ಥಾನ, ಕಾಂಗ್ರೆಸ್ 73 ± 11, ಜೆಡಿಎಸ್ 26 ± 7, ಇತರೇ 3 ± 3 ಸ್ಥಾನ ಸಿಗಲಿದೆ ಎಂದು ತಿಳಿಸಿದೆ. ಬಿಜೆಪಿಗೆ 39% ± 3% ವೋಟ್ ಬಿದ್ದರೆ, ಕಾಂಗ್ರೆಸ್ 36% ± 3%, ಜೆಡಿಎಸ್ 18% ± 3%, ಇತರೆ 7% ± 3% ವೋಟ್ ಪಡೆಯಲಿದೆ ಎಂದು ತಿಳಿಸಿದೆ.

2014ರ ಲೋಕಸಭಾ ಚುನಾವಣೆಯಲ್ಲಿ ಟುಡೇಸ್ ಚಾಣಕ್ಯ ಬಿಜೆಪಿ 291 ಸ್ಥಾನಗಳಿಸಲಿದೆ ಎಂದು ಹೇಳಿತ್ತು. ಫಲಿತಾಂಶ ಬಂದಾಗ ಬಿಜೆಪಿ 282 ಸ್ಥಾನ ಗೆದ್ದುಕೊಂಡಿತ್ತು. ಆದರೆ ಬಿಹಾರ ಚುನಾವಣೆಯಲ್ಲಿ ಟುಡೇಸ್ ಚಾಣಕ್ಯದ ಲೆಕ್ಕಾಚಾರ ತಲೆಕೆಳಾಗಿತ್ತು. ಬಿಜೆಪಿ ಮೈತ್ರಿಕೂಟ 155 ಸ್ಥಾನಗಳಿಸಲಿದೆ ಎಂದು ಟುಡೇಸ್ ಚಾಣಕ್ಯ ಹೇಳಿತ್ತು. ಆದರೆ ಫಲಿತಾಂಶ ಬಂದಾಗ ಎನ್‍ಡಿಎ ಮೈತ್ರಿಕೂಟ 61 ಸ್ಥಾನಗಳಿಸಿತ್ತು.

Comments are closed.