
ಬೆಂಗಳೂರು: ಮತಯಂತ್ರದಲ್ಲಿ(ಇವಿಎಂ) ತಾಂತ್ರಿಕ ದೋಷವಿದ್ದ ಕಾರಣ ಹೆಬ್ಬಾಳದ ಲೊಟ್ಟಗೊಲ್ಲಹಳ್ಳಿ ಮತಗಟ್ಟೆಯಲ್ಲಿ ಮೇ 14ರಂದು ಮರು ಮತದಾನ ನಡೆಸಲು ಚುನಾವಣಾ ಆಯೋಗ ತೀರ್ಮಾನಿಸಿದೆ.
ಈ ಮತಗಟ್ಟೆ ಕೇಂದ್ರದಲ್ಲಿ 1444 ಮತದಾರರಿದ್ದು, ಕೇವಲ 44 ಮತದಾರರು ಮಾತ್ರ ತಮ್ಮ ಹಕ್ಕು ಚಲಾಯಿಸಿದ್ದಾರೆ. ಬೆಳಿಗ್ಗೆಯಿಂದ ಉತ್ಸಾಹದೊಂದಿಗೆ ಮತದಾನ ಮಾಡಲು ಬಂದಿದ್ದ ಮತದಾರರು ಮತಯಂತ್ರದಲ್ಲಿ ದೋಷವಿದ್ದರಿಂದ ನಿರಾಸೆಯಿಂದ ವಾಪಸಾಗಿದ್ದಾರೆ.
ನಂತರ ಬೆಳಿಗ್ಗೆಯಿಂದ ಇಲ್ಲಿಯವರಗೆ ಇದೇ ರೀತಿ ದೋಷ ಕಂಡು ಬಂದಿದೆ. ಅಧಿಕಾರಿಗಳು ಕೂಡ ಬಂದು ಮತಯಂತ್ರವನ್ನು ಸರಿಪಡಿಸಲು ಮುಂದಾಗಿದ್ದರೂ ಲೊಟ್ಟೆಗೊಲ್ಲಹಳ್ಳಿಯ ಮತಗಟ್ಟೆಯ ಮತಯಂತ್ರ ಸರಿಯಾಗದ ಕಾರಣ, ಮತದಾನ ಮಾಡಲು ಸಾಧ್ಯವಾಗಿಲ್ಲ.
ಲೊಟ್ಟೆಗೊಲ್ಲಹಳ್ಳಿಯ ಮತಗಟ್ಟೆ 158ರ ಪೋಲಿಂಗ್ ಸ್ಟೇಷನ್ 2ರ ಮತಯಂತ್ರದಲ್ಲಿ ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ಮರು ಮತದಾನ ಆಯೋಜಿಸುವುದಾಗಿ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದ್ದರು.
Comments are closed.