ಕರ್ನಾಟಕ

ನಮೋ ಆ್ಯಪ್‌ ಮೂಲಕ ಮಾತನಾಡಿದ ಮೋದಿ ಹೇಳಿದ್ದೇನು..?

Pinterest LinkedIn Tumblr

ಬೆಂಗಳೂರು: ದಲಿತ ಮತ್ತು ಹಿಂದುಳಿದ ವರ್ಗದ ಅತಿ ಹೆಚ್ಚು ಸಂಸದರನ್ನು ಚುನಾಯಿಸಿ ಬಿಜೆಪಿ ಲೋಕಸಭೆಗೆ ಕಳುಹಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಬಿಜೆಪಿ ರಾಜ್ಯ ಘಟಕದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಹಾಗೂ ಸ್ಲಂ ಮೋರ್ಚಾ ಕಾರ್ಯಕರ್ತರನ್ನು ಉದ್ದೇಶಿಸಿ ಗುರುವಾರ ನಮೋ ಆ್ಯಪ್‌ ಮೂಲಕ ಮಾತನಾಡಿದರು.

‘ಸಂತ ಕಬೀರ ದಾಸರು ಮತ್ತು ರೊಹಿದಾಸರು ಜಾತಿಯ ಸಂಕೋಲೆಗಳನ್ನು ನಮ್ಮ ಸಮಾಜದಿಂದ ತೆಗೆಯಬೇಕೆಂದು ಪ್ರಯತ್ನ ಮಾಡಿದರು. ಅದೇ ರೀತಿ ಬಸವಣ್ಣ, ಮಾದಾರ ಚನ್ನಯ್ಯ ಮತ್ತು ಇತರೆ ವಚನಕಾರರು ಸಮಾನತೆಯ ಸಮಾಜವನ್ನು ನಿರ್ಮಾಣ ಮಾಡಲು ತಮ್ಮ ಜೀವನವನ್ನು ಸಮರ್ಪಿಸಿದರು. ಅಡೆತಡೆಗಳ ನಡುವೆಯೂ ಭಾರತ ಜಗತ್ತಿನ ಅತ್ಯುನ್ನತ ಸ್ಥಾನಕ್ಕೇರುವುದು ನಿಶ್ಚಿತ ಎಂದು ಅಂಬೇಡ್ಕರ್ ಬಹಳ ಹಿಂದೆಯೇ ಭವಿಷ್ಯ ನುಡಿದಿದ್ದರು. ಅಂಬೇಡ್ಕರ್‌ ಅವರಿಗೂ ಮುನ್ನ ಮಹಾತ್ಮ ಫುಲೆ ಜಾತಿಯ ತಾರತಮ್ಯದ ವಿರುದ್ಧ ಹಾಗೂ ಮಹಿಳೆಯರ ಶಿಕ್ಷಣಕ್ಕಾಗಿ ಹೋರಾಡಿದ್ದರು’ ಎಂದು ಇತಿಹಾಸ ಮೆಲುಕು ಹಾಕಿದರು.

‘ಅಂಬೇಡ್ಕರ್ ವಿಚಾರಗಳು, ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯಗಳನ್ನು ಬಿಜೆಪಿ ಆಸಕ್ತಿಯಿಂದ ಕೈಗೊಳ್ಳುತ್ತಿದೆ. ಅಂಬೇಡ್ಕರ್ ಅವರ ಜೀವನಕ್ಕೆ ಸಂಬಂಧಿಸಿದಂತೆ 5 ಪ್ರಮುಖ ಸ್ಥಳಗಳನ್ನು ‘ಪಂಚ ತೀರ್ಥ’ ಕ್ಷೇತ್ರಗಳಾಗಿ ಅಭಿವೃದ್ಧಿಪಡಿಸಿ ಆ ಮಹಾನ್ ಚೇತನಕ್ಕೆ ಗೌರವ ಸಲ್ಲಿಸುವ ಕೆಲಸ ಮಾಡುತ್ತಿದ್ದೇವೆ. ಈ ತೀರ್ಥ ಕ್ಷೇತ್ರಗಳ ಭೇಟಿಗಾಗಿ ನಿಧಿ ಸ್ಥಾಪಿಸಿ ಹಣ ಮೀಸಲಿಡಲಾಗುವುದು ಎಂದರು.

Comments are closed.