ಕರ್ನಾಟಕ

ಝೆರಾಕ್ಸ್‌ ವೃತ್ತಿಯ ಮಾಡುವವರ ಮಗಳು ಎಸ್ಸೆಸ್ಸೆಲ್ಸಿಯಲ್ಲಿ 6ನೇ ರ‍್ಯಾಂಕ್

Pinterest LinkedIn Tumblr


ಕಲಬುರಗಿ : ನಗರದಲ್ಲಿ ಝೆರಾಕ್ಸ್‌ ಅಂಗಡಿ ನಡೆಸಿಕೊಂಡು ಹೋಗುತ್ತಿರುವವನ ಮಗಳೊಬ್ಬಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 6ನೇ ರ‍್ಯಾಂಕ್ ಪಡೆದು ಗಮನ ಸೆಳೆದಿದ್ದಾರೆ.

ಇಲ್ಲಿನ ಜೇವರ್ಗಿ ರಸ್ತೆ ಕೋಟನೂರ (ಡಿ) ಸಮೀಪದ ಸೆಂಟ್‌ ಮೇರಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿನಿ ಸೃಷ್ಟಿ ಶಿವಕುಮಾರ ಶಾಸ್ತ್ರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 620 ಅಂಕಗಳನ್ನು ಪಡೆದು ಹೆಸರು ಮಾಡಿದ್ದಾಳೆ. ತಾಯಿ ಸರಳ ಅವರು ಖಾಸಗಿ ಶಾಲೆಯೊಂದರಲ್ಲಿ ಕನ್ನಡ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಾರೆ.

ಇಂಗ್ಲಿಷ್‌-123, ಕನ್ನಡ-100, ಹಿಂದಿ-100, ಗಣಿತ-100, ವಿಜ್ಞಾನ-97 ಮತ್ತು ಸಮಾಜ ವಿಜ್ಞಾನ-100 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ 6ನೇ ರಾರ‍ಯಂಕ್‌ ಪಡೆದಿದ್ದಾರೆ. ಇಡೀ ರಾಜ್ಯದಲ್ಲಿ 6ನೇ ರಾರ‍ಯಂಕ್‌ ಪಡೆದ ಒಟ್ಟು 39 ವಿದ್ಯಾರ್ಥಿಗಳ ಪೈಕಿ ಸೃಷ್ಟಿ ಶಾಸ್ತ್ರಿ ಸಹ ಒಬ್ಬರಾಗಿದ್ದಾರೆ.

ಸೃಷ್ಟಿ ಸಾಧನೆ ಕುರಿತು ಮಾಧ್ಯಮವೊಂದು ಸಂಪರ್ಕಿಸಿದಾಗ, ‘ನಿತ್ಯ ಬೆಳಗ್ಗೆ 6ರಿಂದ 8 ಮತ್ತು ಸಂಜೆ 5.30ರಿಂದ 9.30ವರೆಗೆ ಓದುತ್ತಿದ್ದೆ’. ಆಗಾಗ ಮನರಂಜನೆಗಾಗಿ ಟಿವಿ ವೀಕ್ಷಿಸಿದರೂ ಕೇವಲ ಕಾರ್ಟೂನ್‌ ಚಾನಲ್‌ ಮಾತ್ರ ನೋಡುತ್ತಿದ್ದೆ’ ಎಂದು ಸಂತಸ ವ್ಯಕ್ತಪಡಿಸಿದರು.

Comments are closed.