ಕರ್ನಾಟಕ

ಮೋದಿಗೆ 56 ಇಂಚು ಎದೆ ಇದೆ: ಸಿದ್ದರಾಮಯ್ಯ

Pinterest LinkedIn Tumblr


ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿಗೆ 56 ಇಂಚು ಎದೆ ಇದೆ. ಬಾಡಿ ಬಿಲ್ಡರ್‌ಗಳಿಗೆ ಅವರಿಗಿಂತ ದೊಡ್ಡ ಎದೆ ಇರುತ್ತದೆ. ಆದರೆ ಏನು ಪ್ರಯೋಜನ, ಬಡವರ ಪರವಾದ ಹೃದಯ ಇಲ್ಲ. ಮೋದಿ ಬಾಯಿ ಬಡಾಯಿ, ಆದರೆ ಸಾಧನೆ ಶೂನ್ಯ ಎಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಚಾಮರಾಜನಗರ ಜಿಲ್ಲೆಯ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ವರೆಗಿನ ದೇಶದ ಇತಿಹಾಸದಲ್ಲೆ ಅತ್ಯಂತ ಸುಳ್ಳು ಹೇಳುವ ಪ್ರಧಾನಿ ನರೇಂದ್ರ ಮೋದಿಯಾಗಿದ್ದಾರೆ. ಇಂತಹ ಪ್ರಧಾನಿಯನ್ನು ಇತಿಹಾಸದಲ್ಲೆ ಕಂಡಿಲ್ಲ. ಏನೇ ಮಾಡಿದರೂ, 2019ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಅವರು ಕುರ್ಚಿ ಉಳಿಸಿಕೊಳ್ಳುವುದು ಸಾಧ್ಯವಿಲ್ಲ. ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎಂದು ಪ್ರಧಾನಿ ಹೇಳುತ್ತಾರೆ ಆದರೆ ಬಿಜೆಪಿಯಿಂದ ಮುಸ್ಲಿಂ, ಉಪ್ಪಾರ, ಸವಿತಾ ಸಮಾಜದವರಿಗೆ ಟಿಕೆಟ್ ನೀಡಿಲ್ಲ. ಚಾಮರಾಜನಗರಕ್ಕೆ ಬಂದರೆ ಸೋಲುವ ಭೀತಿ ಮೋದಿಗೆ ಇರುವುದರಿಂದಲೇ ಸಂತೇಮಾರನಹಳ್ಳಿಗೆ ಬಂದು ಹೋಗಿದ್ದಾರೆ ಎಂದು ಲೇವಡಿ ಮಾಡಿದರು.

ಅವರಪ್ಪನಾಣೆ ಸಿಎಂ ಆಗಲ್ಲ
ಯಡಿಯೂರಪ್ಪ, ಕುಮಾರಸ್ವಾಮಿ ಅವರಪ್ಪರಾಣೆ ಸಿಎಂ ಆಗುವುದಿಲ್ಲ. ಯಡಿಯೂರಪ್ಪ ಶಾಸ್ತ್ರ ಕೇಳಿಕೊಂಡು ಬಂದು ತಾನು ಮುಖ್ಯಮಂತ್ರಿಯಾಗುತ್ತೇನೆ ಎನ್ನುತ್ತಿದ್ದಾರೆ. ಅಲ್ಲದೆ ದಿನಾಂಕವನ್ನೂ ನಿಗದಿ ಮಾಡಿದ್ದಾರೆ. ಆದರೆ ಅವರು ಸಿಎಂ ಆಗುವುದಿಲ್ಲ. ಬಿಜೆಪಿಗೆ, ಪಕ್ಷೇತರ ಅಭ್ಯರ್ಥಿಗಳಿಗೆ ಮತ ಹಾಕಬೇಡಿ. ಅವರಿಗೆಲ್ಲ ಮತ ಹಾಕಿ ವೇಸ್ಟ್ ಮಾಡಬೇಡಿ. ಅವರಿಗೆ ಮತ ಹಾಕಿದರೆ ನಾನೂ ಮುಖ್ಯಮಂತ್ರಿಯಾಗಲು ತೊಂದರೆಯಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

Comments are closed.