ಕರ್ನಾಟಕ

ಜನಾರ್ದನ ರೆಡ್ಡಿ ನೆರವು ಪಡೆಯಲು ಶಾ ಸೂಚಿಸಿದ್ದಾರೆ: ಬಿಎಸ್‌ವೈ

Pinterest LinkedIn Tumblr


ಶಿವಮೊಗ್ಗ: ಬಳ್ಳಾರಿ ಮತ್ತಿತರ ಕಡೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಜನಾರ್ದನ ರೆಡ್ಡಿ ಅವರ ಸಹಕಾರ ಅಗತ್ಯವಾಗಿದ್ದು, ಅವರ ನೆರವು ಪಡೆಯಲು ಅಮಿತ್‌ ಶಾ ಅವರು ಹೇಳಿರುವುದಾಗಿ ಬುಧವಾರ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಿಎಂ ಅಭ್ಯರ್ಥಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಅವರು ‘ನಮ್ಮ ಪ್ರಣಾಳಿಕೆ ಬಿಡುಗಡೆ ಆದ ಬಳಿಕ ಜನ ವಿಜಯೋತ್ಸವ ಆಚರಿಸುತ್ತಾರೆ. ರೈತ ಪರ ಪ್ರಣಾಳಿಗೆ ಬಿಡುಗಡೆ ಮಾಡುತ್ತಿದ್ದು , ಆ ಬಳಿಕ ಬಳಿಕ ಬಿಜೆಪಿ ಮತಗಳು 3 % ಹೆಚ್ಚಾಗುತ್ತದೆ . ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ಸಾಲ ಮನ್ನಾ ಮಾಡುತ್ತೇವೆ. ನೀರಾವರಿಗೆ 1 ಲಕ್ಷ ಕೋಟಿ ರೂ ಹಣ ಬಿಡುಗಡೆ ಮಾಡುತ್ತೇವೆ. ಇದು ನಾನು ಸಿಎಂ ಆಗಿ ಮೊದಲು ತೆಗೆದುಕೊಳ್ಳುವ ನಿರ್ಣಯ’ ಎಂದರು.

‘ ಸ್ಪಷ್ಟ ಬಹುಮತದೊಂದಿಗೆ ಗೆದ್ದು ನಾನು ಮುಖ್ಯಮಂತ್ರಿಯಾಗುವುದು ಖಚಿತ. ಶಿಕಾರಿಪುರದಲ್ಲಿ 50 ಸಾವಿರ ಮತಗಳಿಂದ ಗೆಲ್ಲುವುದು ಖಚಿತ’ ಎಂದರು.

ಮೋದಿ ಅವರು ಎಚ್‌ಡಿಡಿ ಅವರಿಗೆ ಹೊಗಳಿದ ಬಗ್ಗೆ ಪ್ರತಿಕ್ರಿಯಿಸಿದ ಬಿಎಸ್‌ವೈ ‘ಅದು ಮಾಜಿ ಪ್ರಧಾನಿಗೆ ಮೋದಿ ಅವರು ನೀಡಿರುವ ಗೌರವವಷ್ಟೆ ಜೆಡಿಎಸ್‌ ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ’ ಎಂದರು.

-ಉದಯವಾಣಿ

Comments are closed.