
ಬೆಂಗಳೂರು: ಸಮಾಜದಲ್ಲಿಂದು ಆಧುನಿಕತೆ ಮತ್ತು ತಂತ್ರಜ್ಞಾನದ ಅವಲಂಭನೆಯಿಂದ ಅವಿಭಕ್ತ ಕುಟುಂಬಗಳು ಮರೆಯಾಗಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿವೆ ಎಂದು ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಬೇಸರ ವ್ಯಕ್ತಪಡಿಸಿದರು.
ಬನ್ನೇರುಘಟ್ಟ ಬಳಿಯ ನಿಸರ್ಗ ಬಡಾವಣೆಯ ವಿಎಲ್‌ಎನ್ ಪ್ರಬುದ್ಧಾಲಯದ ಹತ್ತನೇ ವಾರ್ಷಿಕೋತ್ಸವ ಹಾಗೂ ವಿಎಲ್‌ಎನ್ ನಿರ್ಮಾಣ್ ಹಿರಿಯ ನಾಗರೀಕ ಆಜೀವ ಸಾಧನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಂವಿಧಾನದಲ್ಲಿ ಘನತೆ ಮತ್ತು ಗೌರವಯುತವಾಗಿ ಜೀವಿಸುವ ಹಕ್ಕು ಪ್ರತಿಯೊಬ್ಬರಿಗೂ ಇದ್ದು, ಇದರಿಂದ ವಂಚಿತರಾಗಿರುವ ಹಿರಿಯ ನಾಗರಿಕರಿಗೆ ಇಂದು ವೃದ್ಧಾಶ್ರಮಗಳು ಆ ಅವಕಾಶವನ್ನು ಒದಗಿಸಿಕೊಟ್ಟಿವೆ ಎಂದರು.
1882ರಲ್ಲಿ ಕೋಲ್ಕತ್ತಾದಲ್ಲಿ ಸಿಸ್ಟರ್ ಅರ್ಗನೈಜೆಷನ್ ಎಂಬ ಹೆಸರಿನ ವೃದ್ಧಾಶ್ರಮ ಆರಂಭವಾಯಿತು. ಮಕ್ಕಳ ಪ್ರೀತಿಯಿಂದ ವಂಚಿತರಾದ ಪೋಷಕರಿಗೆ ಇದೊಂದು ನೆಮ್ಮದಿಯ ಕೇಂದ್ರವಾಗಿತ್ತು. ಆ ನಂತರ ವೃದ್ಧಾಶ್ರಮದಲ್ಲಿ ಹೆಚ್ಚೆಚ್ಚು ಬೆಳದವು ಎಂದು ಹೇಳಿದರು.
ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಮಣ್ಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಎಲ್‌ಎನ್ ನಿರ್ಮಾಣ್ ಹಿರಿಯ ನಾಗರೀಕ ಆಜೀವ ಸಾಧಾನ ಪ್ರಶಸ್ತಿಯನ್ನು ಪ್ರೊ.ಪಿ.ಕೃಷ್ಣಮಾಚಾರ್, ಆರ್.ಎಸ್.ಪ್ರಭಾ, ಸುಮಿತಾ ಬಾಸೂ, ಬಾಬು ಕಾಮತ್, ರಾಜಲಕ್ಷಿಚಾರಿ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ವಕೀಲರಾದ ಎಸ್.ಎಂ.ಪಾಟೀಲ್. ನಿರ್ಮಾಣ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ವಿ.ಲಕ್ಷಿನಾರಾಯಣ್ ಮತ್ತಿತರರು ಉಪಸ್ಥಿತರಿದ್ದರು.
-ಉದಯವಾಣಿ
Comments are closed.