ಕರ್ನಾಟಕ

ಕೇಳಿದ ಚಿಹ್ನೆ ಸಿಗಲಿಲ್ಲ; ಆತ್ಮಹತ್ಯೆಗೆ ಮುಂದಾದ ಕೆಜೆಪಿ ಅಭ್ಯರ್ಥಿ!

Pinterest LinkedIn Tumblr


ಹಾವೇರಿ: ತಾನು ಕೇಳಿದ ಚಿಹ್ನೆಯನ್ನು ಕೊಡಲಿಲ್ಲ ಎಂಬ ಕಾರಣಕ್ಕೆ ಮನನೊಂದು ಹಿರೇಕೆರೂರು ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಹರೀಶ್‌ ಇಂಗಳಗುಂದಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಹರೀಶ್‌ ಕೆಜೆಪಿಯ ಚಿಹ್ನೆಯಾಗಿದ್ದ ತೆಂಗಿನ ಕಾಯಿ ಕೇಳಿದ್ದರು, ಆದರೆ ಚುನಾವಣಾಧಿಕಾರಿಗಳು ತೆಂಗಿನ ಕಾಯಿಯ ಬದಲು ತೆಂಗಿನ ಮರ ನೀಡಿದ್ದರು. ಇದರಿಂದ ನೊಂದು ಸಾಯಲೆಂದು ಮಾತ್ರೆ ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದಾರೆ.

ಸದ್ಯ ಹರೀಶ್‌ ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ,ಪ್ರಾಣಾಪಾಯದಿದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಹಿರೇಕೆರೂರು ಪೊಲೀಸ್‌ ಠಾಣಾ ವ್ಯಾಪ್ತಿ ಯಲ್ಲಿ ಪ್ರಕರಣ ದಾಖಲಾಗಿದೆ.

-ಉದಯವಾಣಿ

Comments are closed.