ಕರ್ನಾಟಕ

ಕೆರೆಯಲ್ಲಿ ಬಿದ್ದ ಮಗುವನ್ನು ರಕ್ಷಸಿ ನೀರುಪಾಲಾದ ತಂದೆ

Pinterest LinkedIn Tumblr


ಮಂಡ್ಯ: ಕೆರೆಯಲ್ಲಿ ಮುಳುಗುತ್ತಿದ್ದ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾದ ತಂದೆ ಈಜು ಬಾರದ ಕಾರಣ ಕೆರೆಯಲ್ಲಿ ಮುಳುಗಿ ದಾರುಣ ವಾಗಿ ಸಾವನ್ನಪ್ಪಿದ ಘಟನೆ ನಾಗಮಂಗದ ಬೀರೆಶ್ವರ ಕೆರೆಯಲ್ಲಿ ಸೋಮವಾರ ನಡೆದಿದೆ.

ಮೃತ ದುರ್ದೈವಿ ಫಿರೋಜ್‌ ಎನ್ನುವವರಾಗಿದ್ದು, ಪತ್ನಿ ಜುಬಿನ್‌ ತಾಜ್‌ ಅವರು 1 ವರ್ಷದ ಮಗನನ್ನು ಕರೆದುಕೊಂಡು ಕೆರೆ ಬಳಿ ಬಟ್ಟೆ ತೊಳೆಯಲೆಂದು ತೆರಳಿದ್ದಾರೆ. ಈ ವೇಳೆ ಮಗು ಆಯತಪ್ಪಿ ಕೆರೆಗೆ ಬಿದ್ದಿದೆ. ರಕ್ಷಿಸಲು ತೆರಳಿದ ಫಿರೋಜ್‌ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಶವವನ್ನು ಸ್ಥಳಕ್ಕಾಗಮಿಸಿದ ಪೊಲೀಸರು ಮತ್ತು ಅಗ್ನಿ ಶಾಮಕ ದಳದ ಸಿಬಂದಿಗಳು ಮೇಲಕ್ಕೆತ್ತಿದ್ದಾರೆ. ಅಸ್ವಸ್ಥಗೊಂಡಿರುವ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಾಗಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

-ಉದಯವಾಣಿ

Comments are closed.