ಕರ್ನಾಟಕ

ಕಾಂಗ್ರೆಸ್ ಅಭ್ಯರ್ಥಿ ಚೆಲುವರಾಯ ಸ್ವಾಮಿ ಆಪ್ತರ ಮನೆ ಮೇಲೆ ಐಟಿ ದಾಳಿ

Pinterest LinkedIn Tumblr

ನಾಗಮಂಗಲ: ಜೆಡಿಎಸ್‌ ವಿರುದ್ಧ ಬಂಡಾಯವೆದ್ದು ಕಾಂಗ್ರೆಸ್‌ ಸೇರ್ಪಡೆಯಾಗಿರುವ ನಾಗಮಂಗಲ ಕ್ಷೇತ್ರದ ಅಭ್ಯರ್ಥಿ ಚೆಲುವರಾಯಸ್ವಾಮಿ ಅವರ ಆಪ್ತರ ನಿವಾಸಗಳ ಮೇಲೆ ಭಾನುವಾರ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿರುವ ಕುರಿತು ವರದಿಯಾಗಿದೆ.

ಮಾಧ್ಯಮಗಳ ವರದಿಯನ್ವಯ ಚೆಲುವರಾಯಸ್ವಾಮಿ ಆಪ್ತ, ಸುಖಧರೆಯ ಲಕ್ಷ್ಮೀ ನಾರಾಯಣ ಎನ್ನುವವರ ನಿವಾಸದ ಮೇಲೆ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿ ವಾಪಾಸಾಗಿದ್ದಾರೆ ಎಂದು ವರದಿಯಾಗಿದೆ. ಸುಖಧರೆಯ ಲಕ್ಷ್ಮೀ ನಾರಾಯಣ ಮಾತ್ರವಲ್ಲದೇ ಇನ್ನಿಬ್ಬರು ಸಂಬಂಧಿಕರ ಮನೆಗಳ ಮೇಲೂ ಐಟಿ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಲಕ್ಷ್ಮೀನಾರಾಯಣ್ ಮುಂಬೈನಲ್ಲಿ ಹೊಟೆಲ್ ಉದ್ಯಮಿಯಾಗಿದ್ದು, ಮೈಸೂರು ಬೆಂಗಳೂರಿಂದ ಬಂದ ಸುಮಾರು 30 ಅಧಿಕಾರಿಗಳ ತಂಡ ದಾಳಿ ಮಾಡಿ ಮನೆಯಲ್ಲಿ ಸಿಕ್ಕದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಧಿಕಾರಿಗಳಿಗೆ 30 ಸಾವಿರ ರು. ನಗದು ದೊರೆತಿದ್ದು, ಅದನ್ನು ಮನೆಯವರಿಗೇ ನೀಡಿ ಅಧಿಕಾರಿಗಳು ವಾಪಸ್ ಆಗಿದ್ದಾರೆ ಎಂದು ವರದಿಯಾಗಿದೆ.

Comments are closed.