ಕರ್ನಾಟಕ

ಕಾಂಗ್ರೆಸ್ ಪ್ರಚಾರದಲ್ಲಿ ಅಶ್ಲೀಲ ನೃತ್ಯ

Pinterest LinkedIn Tumblr


ಚಿಕ್ಕಬಳ್ಳಾಪುರ: ಬಾಗೇಪಲ್ಲಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಎಸ್.ಎನ್.ಸುಬ್ಬಾರೆಡ್ಡಿ ಅವರ ಪ್ರಚಾರ ಕಾರ್ಯಕ್ರಮದಲ್ಲಿ ತೃತೀಯ ಲಿಂಗಿಗಳನ್ನು ಲೈಂಗಿಕವಾಗಿ ಬಳಸಿಕೊಂಡಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲವನ್ನುಂಟು ಮಾಡಿದೆ.

ವರ್‌ಲಕೊಂಡ ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ ಶನಿವಾರ ಸಂಜೆ ಸುಬ್ಬಾರೆಡ್ಡಿ ಅವರಿಂದ ಪ್ರಚಾರ ಕೈಗೊಳ್ಳಲಾಗಿತ್ತು. ಅವರು ಬರುವ ಮುನ್ನವೇ ಸಾರ್ವಜನಿಕರನ್ನು ಹಿಡಿದಿಡುವ ಉದ್ದೇಶದಿಂದ ಸುಮಾರು 20 ಜನ ತೃತೀಯ ಲಿಂಗಿಗಳಿಂದ (ಲಿಂಗತ್ವ ಅಲ್ಪಸಂಖ್ಯಾತರು) ನಡು ರಸ್ತೆಯಲ್ಲಿಯೇ ನೃತ್ಯ ಮಾಡಿಸಲಾಗಿದೆ.

ಈ ವೇಳೆ ಗ್ರಾಮಸ್ಥರು ಅವರ ಎದೆ ಭಾಗವನ್ನು ಮುಟ್ಟಿ ಅಶ್ಲೀಲ ರೀತಿಯಲ್ಲಿ ವರ್ತಿಸಿದ್ದಾರೆ. ಇದನ್ನು ವಿರೋಧಿಸುವ ಗೋಜಿಗೂ ಅವರು ಹೋಗದಿರುವುದು ವಿಪರ್ಯಾಸ.

ಅಶ್ಲೀಲ ನೃತ್ಯ, ಕೆಲವರ ಅಸಭ್ಯ ವರ್ತನೆಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸಂಜೆ ವೇಳೆಯಲ್ಲಿ ನಡು ರಸ್ತೆಯಲ್ಲಿ ಈ ರೀತಿ ಆಮಿಷಗಳನ್ನು ನೀಡಿ ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿರುವ ಬಗ್ಗೆ ಪ್ರಜ್ಞಾವಂತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments are closed.