ರಾಷ್ಟ್ರೀಯ

ಚಾಯ್‌ಬಾಸಾದಿಂದ ಮಾವೋ ಉಗ್ರನನ್ನು ಬಂಧಿಸಿದ ಎನ್‌ಐಎ

Pinterest LinkedIn Tumblr


ಜಮ್ಶೆದ್‌ಪುರ: ಮಾಜಿ ಜೆಡಿಯು ಶಾಸಕರೋರ್ವರ ಹತ್ಯೆಯಲ್ಲಿ ಶಾಮೀಲಾಗಿದ್ದ ಮಾವೋ ಉಗ್ರನೋರ್ವನನ್ನು ಎನ್‌ಐಎ ತಂಡದವರು ಪಶ್ಚಿಮ ಸಿಂಗಭೂಮ್‌ ಜಿಲ್ಲೆಯ ಚಾಯ್‌ಬಾಸಾದಲ್ಲಿ ಬಂಧಿಸಿದ್ದಾರೆ.

ಕುಂದನ್‌ ಪಹಾನ್‌ ಮಾವೋ ದಳದ ಓರ್ವ ಸದಸ್ಯನಾಗಿರುವ ಸುಶೀಲ್‌ ಡಾಂಗಿಲ್‌ ಅಲಿಯಾಸ್‌ ಕ್ರಿಸ್‌ ನನ್ನು ಎನ್‌ಐಎ ದಳದವರು ನಿನ್ನೆ ಬಂಧಿಸಿದರು.

2008ರಲ್ಲಿ ರಾಂಚಿಯ ತಮಾರ್‌ ಎಂಬಲ್ಲಿ ಜೆಡಿಯು ಶಾಸಕ ರಮೇಶ್‌ ಸಿಂಗ್‌ ಮುಂಡಾ ಅವರನ್ನು ಹತ್ಯೆಗೈದ ಏಳು ಆರೋಪಿಗಳಲ್ಲಿ ಸುಶೀಲ್‌ ಡಾಂಗಿಲ್‌ ಒಬ್ಬನಾಗಿದ್ದಾನೆ.

-ಉದಯವಾಣಿ

Comments are closed.