ಕರ್ನಾಟಕ

ಸಿದ್ದರಾಮಯ್ಯ ಲಜ್ಜೆಗೆಟ್ಟ ಮುಖ್ಯಮಂತ್ರಿ, ಅವರು ಕಾಂಗ್ರೆಸ್‌ನ ‌ಕೊನೆಯ ಸಿಎಂ: ಯಡಿಯೂರಪ್ಪ

Pinterest LinkedIn Tumblr

ಹಾಸನ: ಜನಾರ್ಧನ ರೆಡ್ಡಿಗೆ ಸೀಟ್‌ ಟಿಕೆಟ್‌ ಕೊಟ್ಟಿಲ್ಲ, ಅವರೂ ಕೇಳೂ ಇಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಅವರ ಸಹಾಯದಿಂದ 10–15 ಸ್ಥಾನ ಗೆಲ್ಲುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಶುಕ್ರವಾರ ಸುದ್ದಿಗಾರರ ಜತೆ ಮಾತನಾಡುವಾಗ, ಮಾಧ್ಯಮದವರ ಮೇಲೆಯೇ ಸಿಟ್ಟಾದ ಯಡಿಯೂರಪ್ಪ ಅವರು, ರಾಜ್ಯವನ್ನು ಲೂಟಿ‌ ಮಾಡಿದ ಸಿಎಂ ಸಿದ್ದರಾಮಯ್ಯ ಬಗ್ಗೆ ಪದೇ ಪದೇ ಏಕೆ ಕೇಳುತ್ತೀರಿ ಎಂದು ಯಡಿಯೂರಪ್ಪ ಗರಂ ಆದರು.

ಸಿದ್ದರಾಮಯ್ಯ ಲಜ್ಜೆಗೆಟ್ಟ ಮುಖ್ಯಮಂತ್ರಿ, ಅವರು ಕಾಂಗ್ರೆಸ್‌ನ ‌ಕೊನೆಯ ಮುಖ್ಯಮಂತ್ರಿ. ಸಿಎಂಗೆ ಸೋಲೋ ಭೀತಿಯಿಂದ ಏನೇನೋ ಮಾತನಾಡುತ್ತಿದ್ದಾರೆ ಎಂದರು.

ನಮಗೆ ಸಹಾಯವಾಗೋದಾದ್ರೆ ವಿರೋಧಿಗಳ ನೆರವನ್ನೂ ಪಡೆಯಿರಿ ಎಂದು ಅಮಿತ್‌ ಷಾ ಅವರು ಹೇಳಿದ್ದಾರೆ ಎಂದರು.

ಯಾವುದೇ ಕಾರಣಕ್ಕೂ ನಾಮ್ಮದು ಜೆಡಿಎಸ್ ಜೊತೆ ಹೊಂದಾಣಿಕೆ ಇಲ್ಲ. ವಿಜಯೇಂದ್ರ ಸ್ಪರ್ಧೆ ‌ಬೇಡ ಎಂಬುದು ರಾಷ್ಟ್ರ ನಾಯಕರ ತೀರ್ಮಾನ. ತಂದೆ ಮಗನ ಸ್ಪರ್ಧೆ ಬೇಡ ಎಂದಿದ್ದಕ್ಕೆ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಉತ್ತರ ಪ್ರದೇಶ ಚುನಾವಣಾ ಫಲಿತಾಂಶ ರಾಜ್ಯದಲ್ಲೂ ಪುನರಾವರ್ತನೆಯಾಗಲಿದೆ. ನಾವು ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿದ್ದೇವೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ‌ ಅವರು ಸೇರಿದಂತೆ ಹಲವು ರಾಜ್ಯಗಳ ಸಿಎಂ‌ ಪ್ರಚಾರಕ್ಕೆ ಬರಲಿದ್ದಾರೆ. ಏ.30ಕ್ಕೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಲಾಗುವುದು. ಕಾಂಗ್ರೆಸ್ ಪ್ರಣಾಳಿಕೆಗೆ ಕವಡೆ ಕಾಸಿನ ಕಿಮತ್ತಿಲ್ಲ. ಅದರ ಬಗ್ಗೆ ಮಹತ್ವ ಕೊಡುವುದಿಲ್ಲ. ನಮ್ಮ ಪ್ರಣಾಳಿಕೆ ನೋಡಿ ಮಾತನಾಡಿ ಎಂದು ಯಡಿಯೂರಪ್ಪ ಹೇಳಿದರು.

Comments are closed.