ಕರ್ನಾಟಕ

ಕರ್ನಾಟಕ ವಿಧಾನಸಭೆ ಚುನಾವಣೆ ಏನು ಎತ್ತ? ಇಲ್ಲಿದೆ ಸಂಪೂರ್ಣ ಮಾಹಿತಿ

Pinterest LinkedIn Tumblr


ಬೆಂಗಳೂರು: ಮುಂದಿನ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಕರ್ನಾಟಕ ವಿಧಾನಸಭೆ 2018 ಈಗಾಗಲೇ ಭಾರಿ ಕುತೂಹಲ ಕೆರಳಿಸಿದೆ.

ಅಭ್ಯರ್ಥಿಗಳ ಘೋಷಣೆ, ಬಂಡಾಯ, ನಾಯಕರಿಂದ ಆ ಪಕ್ಷ, ಈ ಪಕ್ಷಗಳತ್ತ ಜಂಪಿಂಗ್‌, ನಾಮಪತ್ರ ಸಲ್ಲಿಕೆ, ವಾದ-ಪ್ರತಿವಾದ, ಆರೋಪ-ಪ್ರತ್ಯಾರೋಪ, ದ್ವೇಷ ರಾಜಕಾರಣ, ಟಿಕೆಟ್‌ ಮಿಸ್‌ ಆಗಿದ್ದು, ಮಠ ರಾಜಕೀಯ, ಟಿಕೆಟ್‌ ಸಿಗದ ನಾಯಕರ ಗೋಳಾಟ ಎಲ್ಲವನ್ನೂ ಕರ್ನಾಟಕ ಜನತೆ ನೋಡಿದೆ.

15 ದಿನದಲ್ಲೇ ರಾಜಕೀಯ ನಾಯಕರ ಬಣ್ಣ ಬಯಲಾಗಿದೆ. ಇದು ಕಾಂಗ್ರೆಸ್‌ ವರ್ಸಸ್‌ ಬಿಜೆಪಿ ನಡುವಿನ ಚುನಾವಣೆ ಎಂದೇ ಬಿಂಬಿತವಾಗಿದ್ದರೂ ಜೆಡಿಎಸ್‌ ತಾನು ಕಿಂಗ್‌ ಮೇಕರ್‌ ಆಗುವ ಕನಸು ಕಾಣುತ್ತಿದೆ.

ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ ಮುಖ್ಯಮಂತ್ರಿ ಹುದ್ದೆಗೇರಲು ಸಂಕಲ್ಪ ತೊಟ್ಟಿದ್ದಾರೆ. ಒಟ್ಟಾರೆ ಭಾರಿ ಚರ್ಚೆ, ಕುತೂಹಲವನ್ನು ಹುಟ್ಟುಹಾಕಿರುವ ಕರ್ನಾಟಕ ವಿಧಾನಸಭೆ ಚುನಾವಣೆಯ ಸಂಪೂರ್ಣ FAQ ಇಲ್ಲಿದೆ.

ಯಾರಾಗ್ತಾರೆ ಮುಖ್ಯಮಂತ್ರಿ

ಕರ್ನಾಟಕ ವಿಧಾನಸಭೆ ಚುನಾವಣೆ 2018 ಎಂದು ನಡೆಯುತ್ತದೆ?
ಮೇ 12, 2018 ರಂದು ಚುನಾವಣೆ, ಒಂದೇ ಹಂತದಲ್ಲಿ ಮತದಾನ.

ಮತ ಎಣಿಕೆ ಎಂದು?
ಮೇ 15, 2018ರಂದು ಮತ ಎಣಿಕೆ, ಅಂದೇ ಫಲಿತಾಂಶ.

ಕರ್ನಾಟಕದಲ್ಲಿರುವ ಒಟ್ಟು ವಿಧಾನಸಭೆ ಕ್ಷೇತ್ರಗಳು ಎಷ್ಟು?
ಕರ್ನಾಟಕದಲ್ಲಿ ಒಟ್ಟು ವಿಧಾನಸಭೆ ಕ್ಷೇತ್ರಗಳು 224. ಅದರಲ್ಲಿ 36 ಪರಿಶಿಷ್ಟ ಜಾತಿಗೆ, 15 ಪರಿಶಿಷ್ಟ ಪಂಗಡಕ್ಕೆ ಮೀಸಲು.

ಕರ್ನಾಟಕದಲ್ಲಿರುವ ಮತದಾರರ ಸಂಖ್ಯೆ ಎಷ್ಟು?
ಒಟ್ಟು ಮತದಾರರು 4.9 ಕೋಟಿ.

ಚುನಾವಣೆ ಅಧಿಸೂಚನೆ ದಿನಾಂಕ ಪ್ರಕಟಣೆ?
ಏಪ್ರಿಲ್‌ 27, 2018 ರಂದು ಅಧಿಸೂಚನೆ ಪ್ರಕಟ

ನಾಮಪತ್ರ ಸಲ್ಲಿಕೆ ಕೊನೆ ದಿನ?
ಏಪ್ರಿಲ್ 24, 2018

ನಾಮಪತ್ರ ಪರಿಶೀಲನೆ?
ಏಪ್ರಿಲ್ 25

ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆ ದಿನ?
ಏಪ್ರಿಲ್ 27

ಮತಯಂತ್ರ, ವಿವಿಪ್ಯಾಟ್‌

ರಾಜ್ಯದಲ್ಲಿರುವ ಒಟ್ಟು ಮತಗಟ್ಟೆಗಳು
56,696.

ಕರ್ನಾಟಕದಲ್ಲಿರುವ ಲೋಕಸಭಾ ಕ್ಷೇತ್ರಗಳು?
28 ಕ್ಷೇತ್ರ

2013ರ ಚುನಾವಣೆ ಫಲಿತಾಶ, ಮುಖ್ಯಮಂತ್ರಿ?
2013ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಗಳಿಸಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಆಯ್ಕೆಯಾದರು.

Comments are closed.