ಕರ್ನಾಟಕ

ನಾಮಪತ್ರ ಸಲ್ಲಿಸಿ ಹಿಂದಿರುಗುವ ವೇಳೆ ಅಪಘಾತ: ನಾಲ್ವರು ಬಿಜೆಪಿ ಕಾರ್ಯಕರ್ತರ ದುರ್ಮರಣ

Pinterest LinkedIn Tumblr

1
ಚಿಕ್ಕಮಗಳೂರು: ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಬಂದು ಹಿಂದಿರುಗುವ ವೇಳೆ ಅಪಘಾತ ಸಂಭವಿಸಿದ ಪರಿಣಾಮ ನಾಲ್ವರು ಬಿಜೆಪಿ ಕಾರ್ಯಕರ್ತರು ಮೃತಪಟ್ಟಿದ್ದಾರೆ.

ಬಿಜೆಪಿ ಅಭ್ಯರ್ಥಿ ಸುರೇಶ್‌ ನಾಮಪತ್ರ ಸಲ್ಲಿಸಲು ನೂರಾರು ಕಾರ್ಯಕರ್ತರು ಆಗಮಿಸಿದ್ದರು. ಸುರೇಶ್‌ ನಾಮಪತ್ರ ಸಲ್ಲಿಸಿದ ನಂತರ ಹಿಂದಿರುಗುವ ವೇಳೆ ಕಾರ್ಯಕರ್ತರು ಇದ್ದ ಬಲೆರೋ ವಾಹನ ಮರಕ್ಕೆ ಡಿಕ್ಕಿ ಹೊಡೆದ ಮೂವರು ಮೃತಪಟ್ಟಿದ್ದಾರೆ. ಇಬ್ಬರು ಕಾರ್ಯಕರ್ತರು ತೀವ್ರವಾಗಿ ಗಾಯಗೊಂಡಿದ್ದಾರೆ.

ತರೀಕೆರೆ ತಾಲೂಕಿನ ಮಾಕೋನಹಳ್ಳಿ ಗ್ರಾಮದ ಬಳಿ ಈ ದುರ್ಘಟನೆ ನಡೆದಿದೆ.

ಆಂಜನೇಯ (45), ಸುರೇಶ್, (40) ಆನಂದ (32) ಮೃತರು. ಮತ್ತೊಬ್ಬರ ಗುರುತು ದೊರೆತಿಲ್ಲ.

ನಾಮಪತ್ರ ಸಲ್ಲಿಕೆ ನಂತರ ಕಾರ್ಯಕರ್ತರು ಅಜ್ಜಂಪುರದ ಕಡೆ ಹೋಗುತ್ತಿದ್ದರು.

ಮೃತರು ಅಜ್ಜಂಪುರ ಸಮೀಪದ ಜಲಧಿಹಳ್ಳಿ ಗ್ರಾಮದವರು. ಸ್ಥಳಕ್ಕೆ ಅಜ್ಜಂಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Comments are closed.