ಕರ್ನಾಟಕ

ಚುನಾವಣಾ ಅಖಾಡ; ಮಡಿಕೇರಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ ಯಡೂರಪ್ಪ

Pinterest LinkedIn Tumblr

ಮಡಿಕೇರಿ: ರಾಜ್ಯಾದ್ಯಂತ ಸೋಮವಾರ ಘಟಾನುಘಟಿ ನಾಯಕರು ಉಮೇದುವಾರಿಕೆ ಸಲ್ಲಿಸಿದ್ದು, ಕೃಷಿಕ, ಕಂದಾಯ ಇಲಾಖೆ ನಿವೃತ್ತ ಅಧಿಕಾರಿಯಾಗಿರುವ ಪಿಎಸ್ ಯಡೂರಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಮಡಿಕೇರಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದರು.

ಪಿರಿಯಾಪಟ್ಟಣ ನಿವಾಸಿಯಾಗಿರುವ ಯಡೂರಪ್ಪನವರು ಚುನಾವಣಾಧಿಕಾರಿ ರಮೇಶ್ ಅವರಿಗೆ ನಾಮಪತ್ರ ಸಲ್ಲಿಸಿದರು.

ತಾನು ಲಿಂಗಾಯತ ಧರ್ಮಕ್ಕೆ ಸೇರಿದವನಾಗಿದ್ದು, ತನ್ನದು ಮನುಷ್ಯ ಧರ್ಮ. ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರು ಸ್ಪರ್ಧಿಸಬಹುದು ಎಂದು ನಾಮಪತ್ರ ಸಲ್ಲಿಕೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.

2016ರಲ್ಲಿ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆ ಸಂದರ್ಭದಲ್ಲಿಯೂ ಪಿಎಸ್ ಯಡೂರಪ್ಪನವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು.

-ಉದಯವಾಣಿ

Comments are closed.