ಕರ್ನಾಟಕ

ಮಂಡ್ಯದ್ದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ಐದು ರೂ. ಡಾಕ್ಟರ್‌ !

Pinterest LinkedIn Tumblr

ಮಂಡ್ಯ: ಐದ್‌ ರೂಪಾಯ್‌ ಡಾಕ್ಟರ್‌ ಎಂದೇ ಪ್ರಸಿದ್ಧ್ಧಿಯಾದ ಮಂಡ್ಯದ ಹೆಸರಾಂತ ಚರ್ಮ ಮತ್ತು ಲೈಂಗಿಕ ರೋಗಗಳ ತಜ್ಞ ಡಾ.ಎಸ್‌.ಸಿ.ಶಂಕರೇಗೌಡ ಅವರು ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.

ಜಿ.ಪಂ. ಮಾಜಿ ಉಪಾಧ್ಯಕ್ಷರೂ ಆದ ವೈದ್ಯ ಡಾ.ಶಂಕರೇಗೌಡ ಅವರದು ಏಕಾಂಗಿ ಹೋರಾಟ. 2010ರಲ್ಲಿ ನಡೆದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ದುದ್ದ ಕ್ಷೇತ್ರದಿಂದ ಜೆಡಿಎಸ್‌ ವರಿಷ್ಠರು ಹಾಗೂ ಜನರ ಒತ್ತಾಯದ ಮೇರೆಗೆ ಶಂಕರೇಗೌಡ ಅವರು ಸ್ಪರ್ಧಿಸಿ, ಅತಿ ಹೆಚ್ಚಿನ ಮತಗಳಿಂದ ಗೆದ್ದಿದ್ದರು. ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ತಮಗೆ ಜೆಡಿಎಸ್‌ ಬಿ ಫಾರಂ ನೀಡುವಂತೆ ವರಿಷ್ಠರನ್ನು ಮನವಿ ಮಾಡಿದ್ದರು. 12 ಆಕಾಂಕ್ಷಿಗಳ ನಡುವೆ ಡಾ.ಶಂಕರೇಗೌಡ ಒಬ್ಬರಾಗಿದ್ದರು. ತಮ್ಮದೇ ಅಭಿಮಾನಿಗಳ ಪಡೆಯೊಂದಿಗೆ ಚುನಾವಣಾ ಪ್ರಚಾರದಲ್ಲೂ ಸಕ್ರಿಯರಾಗಿದ್ದರು.

ಈ ಮಧ್ಯೆ ಬಿಜೆಪಿ ನಾಯಕರು ಡಾ.ಶಂಕರೇಗೌಡ ಅವರನ್ನು ಸೆಳೆಯುವ ಪ್ರಯತ್ನ ಮಾಡಿದ್ದರು. ಒಂದು ಹಂತದಲ್ಲಿ ಡಾ.ಶಂಕರೇಗೌಡರು ಬಿಜೆಪಿ ಹೋಗೇ ಬಿಡುತ್ತಾರೆ ಎನ್ನುವ ಸಂದರ್ಭದಲ್ಲಿ ಅವರು ದಿಢೀರನೆ ಪಕ್ಷೇತರವಾಗಿ ಚುನಾವಣಾ ಕಣಕ್ಕೆ ಧುಮುಕುವ ನಿರ್ಧಾರ ತೆಗೆದುಕೊಂಡಿದ್ದರು.

ಎಲ್ಲದಕ್ಕೂ ಡಾ.ಶಂಕರೇಗೌಡ ಸ್ವತಃ ತೆರೆ ಎಳೆದಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸುವುದಾಗಿ ಹೇಳಿದ್ದಾರೆ. ಬೆಳಗ್ಗೆ 11ಕ್ಕೆ ನಗರದ ಬಂದೀಗೌಡ ಬಡಾವಣೆಯಲ್ಲಿನ ತಮ್ಮ ನಿವಾಸದಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿ ಎದುರಿನ ಕಾವೇರಿವನ ಮತ್ತು ಭವ್ಯವನದಲ್ಲಿನ ಕಾವೇರಿ ಮಾತೆ, ಸರ್‌ಎಂವಿ, ಅಂಬೇಡ್ಕರ್‌, ಡಾ.ಬಾಬು ಜಗಜೀವನರಾಂ ಅವರ ಪ್ರತಿಮೆಗಳು ಹಾಗೂ ಗಾಂಧೀಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಲಿದ್ದಾರೆ. ನಂತರ ತಾಲೂಕು ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ

Comments are closed.