ರಾಷ್ಟ್ರೀಯ

ಏರ್ ಇಂಡಿಯಾ ವಿಮಾನದಲ್ಲಿ ಕಳಚಿ ಬಿದ್ದ ಕಿಟಕಿ; ಮೂವರಿಗೆ ಗಾಯ

Pinterest LinkedIn Tumblr

ನವದೆಹಲಿ; ಪಂಜಾಬ್ ರಾಜ್ಯದ ಅಮೃತಸರದಿಂದ ರಾಜಧಾನಿ ದೆಹಲಿಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನದ ಕಿಟಕಿಯ ಒಳಭಾಗ ಕಳಚಿ ಬಿದ್ದ ಪರಿಣಾಮ, ಮೂವರು ವಿಮಾನಯಾನಿಗಳಿಗೆ ಗಾಯವಾಗಿರುವ ಘಟನೆ ಶನಿವಾರ ನಡೆದಿದೆ.

ಬೋಯಿಂಗ್ 787 (ಎಐ 462) ಡ್ರೀಮ್’ಲೈನರ್ ನಲ್ಲಿ ಘಟನೆ ನಡೆದಿದ್ದು, 10-15 ನಿಮಿಷಗಳ ವಿಮಾನ ನಿಯಂತ್ರಣಾಧಿಕಾರಿಗಳು ಹಾಗೂ ವಿಮಾನಯಾನಿಗಳು ಭೀತಿಗೊಳಲಾಗಿದ್ದರು ಎಂದು ತಿಳಿದುಬಂದಿದೆ.

ಘಟನೆಯಲ್ಲಿ ಮೂವರು ವಿಮಾನಯಾನಿಗಳಿಗೆ ಗಾಯಗಳಾಗಿದ್ದು, ಪ್ರಯಾಣಿಕರ ಆಸನದ ಮೇಲೆ ಅಳವಡಿಲಾಗಿದ್ದ ಆಮ್ಲಜನಕದ ಮಾಸ್ಕ್ ಗಳೂ ಕೂಡ ಚೆಲ್ಲಾಪಿಲ್ಲಿಯಾಗಿದ್ದವು ಎಂದು ವರದಿಗಳು ತಿಳಿಸಿವೆ.

ಅಮೃತಸರ-ದೆಹಲಿಯ ವಿಮಾನಯಾನ 35 ನಿಮಿಷಗಳಿದ್ದವು. ವಿಮಾನದಲ್ಲಿ 240 ಪ್ರಯಾಣಿರಿದ್ದ ಸಂದರ್ಭದಲ್ಲಿ ಘಟನೆ ಸಂಭವಿಸಿದೆ.

ವಿಮಾನದ ಕಿಟಕಿ ಕಳಚಿ ಬಿದ್ದಿರುವ ಘಟನೆಯ 50 ಸೆಕೆಂಡ್ ಗಳ ದೃಶ್ಯಾವಳಿಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಿಡಿಯೋ ವೈರಲ್ ಆಗಿದೆ.

ಇದೇ ರೀತಿಯ ಘಟನೆ 2014ರ ಅಕ್ಟೋಬರ್ ತಿಂಗಳಿನಲ್ಲಿಯೂ ನಡೆದಿದ್ದು, ಸಿಂಗಾಪುರ ಏರ್’ಲೈನ್ಸ್ ಎ-380 ವಿಮಾನ ಮುಂಬೈನಲ್ಲಿ ಇಳಿಯುವ ಹಂತದಲ್ಲಿದ್ದಾಗ ಅವಘಡ ಸಂಭವಿಸಿತ್ತು. ಘಟನೆಯಲ್ಲಿ 22 ಮಂದಿ ಗಾಯಗೊಂಡಿದ್ದರು.

Comments are closed.