ಶಿರಸಿ: ಅಪಘಾತ ಪ್ರಕರಣದಲ್ಲಿ ತಮ್ಮ ಕೊಲೆಗೆ ಯತ್ನಿಸಲಾಗಿದೆ ಎಂದು ಆರೋಪಿಸಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಈಗ ಮತ್ತೊಂದು ಮಾಹಿತಿ ಬಹಿರಂಗಪಡಿಸಿದ್ದು ತಮಗೆ ಅನಾಮಿಕ ವ್ಯಕ್ತಿಯಿಂದ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರು ನೀಡಿದ್ದಾರೆ.
ತಮ್ಮ ಆಪ್ತ ಕಾರ್ಯದರ್ಶಿಯ ಮೂಲಕ ದೂರು ದಾಖಲಿಸಿರುವ ಅನಂತ್ ಕುಮಾರ್ ಹೆಗ್ಡೆ +040044 ಪ್ರಾರಂಭವಾಗುವ ನಂಬರ್ ನಿಂದ, ಇಂಟರ್ ನೆಟ್ ಕರೆ ಮೂಲಕ ಬೆಳಿಗ್ಗೆ 2 ಗಂಟೆ ವೇಳೆಗೆ ವ್ಯಕ್ತಿಯೊಬ್ಬ ಕರೆ ಮಾಡಿ ” ನಿನ್ನ ತಲೆ ಕಡಿದು, ದೇಹವನ್ನು ತುಂಡು ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕೇಂದ್ರ ಸಚಿವರಿಗೆ ಕೊಲೆ ಬೆದರಿಕೆ ಬಂದಿರುವ ಬಗ್ಗೆ ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಸೆಕ್ಷನ್ 504, 507 ರ ಅಡಿಯಲ್ಲಿ ಪ್ರಕರಾಣ ದಾಖಲಾಗಿದೆ.
Comments are closed.