ಕರ್ನಾಟಕ

ಸಿಎಂ ಸಿದ್ದರಾಮಯ್ಯ ಅರ್ಧ ಗಂಟೆ ಕಾದರೂ ಸಿಗಲಿಲ್ಲ ರೆಬೆಲ್‌ಸ್ಟಾರ್‌!

Pinterest LinkedIn Tumblr


ಮೈಸೂರು : ಬಿ ಫಾರಂ ಕೈಗೆ ನೀಡಿದರೂ ಇನ್ನೂ ತನ್ನ ಸ್ಫರ್ಧೆಯ ಕುರಿತು ಗುಟ್ಟು ಬಿಟ್ಟುಕೊಡದೆ ಕಾಂಗ್ರೆಸ್‌ ನಾಯಕರಿಗೆ ತೀವ್ರ ತಲೆ ನೋವು ತಂದಿಟ್ಟಿರುವ ಅಂಬರೀಷ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಧಾನಕ್ಕೂ ಸಿಗದೆ ಶಾಕ್‌ ನೀಡಿದ್ದಾರೆ.

ಮೈಸೂರಿನ ಸಂದೇಶ್‌ ದಿ ಪ್ರಿನ್ಸ್‌ ಹೊಟೇಲ್‌ನಲ್ಲಿದ್ದ ಅಂಬರೀಷ್‌ ಅವರು ಸಿಎಂ ಮೈಸೂರಿನ ನಿವಾಸಕ್ಕೆ ತೆರಳುತ್ತಾರೆ ಎನ್ನಲಾಗಿತ್ತು ಆದರೆ ಅಲ್ಲಿಗೂ ತೆರಳೆದೆ ನೇರವಾಗಿ ಬೆಂಗಳೂರಿಗೆ ವಾಪಾಸಾಗಿದ್ದಾರೆ.

ಅಂಬರೀಷ್‌ ಅವರನ್ನು ಭೇಟಿಯಾಗಲೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್‌.ಡಿ.ಕೋಟೆ ಪ್ರಚಾರ ಸಭೆ ಮುಗಿಸಿ ತನ್ನ ಬೇರೆ ಕಾರ್ಯಕ್ರಮಗಳನ್ನು ಬದಿಗೊತ್ತಿ ಮನೆಗೆ ಆಗಮಿಸಿದ್ದರು ಆದರೆ ಅರ್ಧ ಗಂಟೆಗಳ ಕಾಲ ಕಾದರೂ ಬರದ ಕಾರಣ ಪ್ರಚಾರಕ್ಕಾಗಿ ತೆರಳಿದ್ದಾರೆ ಎಂದು ತಿಳಿದು ಬಂದಿದೆ.

ಅಂಬರೀಷ್‌ ಸ್ಪರ್ಧೆ ಮಾಡಲ್ಲ!
ಅಂಬರೀಷ್‌ ಅವರು ಅನಾರೋಗ್ಯದ ಕಾರಣದಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ಸ್ನೇಹಿತ ಸಂದೇಶ್‌ ನಾಗರಾಜ್‌ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು ನಾಳೆ ಸಂಜೆವೇಳೆಗೆ ಈ ಬಗ್ಗೆ ಅಧಿಕೃತವಾಗಿ ಸ್ಪಷ್ಟಪಡಿಸಲಿದ್ದಾರೆಎಂದಿದ್ದಾರೆ.

-ಉದಯವಾಣಿ

Comments are closed.