ಕರ್ನಾಟಕ

ಕೈ ಪರ ಶಾ ಪ್ರಚಾರ: ವೇಣುಗೋಪಾಲ್‌ ವ್ಯಂಗ್ಯ

Pinterest LinkedIn Tumblr


ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಕರ್ನಾಟಕದಲ್ಲಿ ಕಾಂಗ್ರೆಸ್‌ ಪರ ಪ್ರಚಾರ ಮಾಡುತ್ತಿದ್ದಾರೆಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ವ್ಯಂಗ್ಯವಾಡಿದ್ದಾರೆ. ಚುನಾವಣೆ ಪ್ರಚಾರಕ್ಕಾಗಿ “ಸಿಎಂ ಟಾಕ್ಸ್‌’
ಎಂಬ ವಿನೂತನ ಆ್ಯಪ್‌ ಬಿಡುಗಡೆ ಮಾಡಿ ಮಾತನಾಡಿದ ಅವರು, ಅಮಿತ್‌ ಶಾ ರಾಜ್ಯ ಪ್ರವಾಸದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಹಾಗೂ ಯಡಿಯೂರಪ್ಪ ಅವರ ಭ್ರಷ್ಟಾಚಾರದ ಬಗ್ಗೆ ಸತ್ಯ ಹೇಳುತ್ತಿದ್ದಾರೆಂದು ಲೇವಡಿ ಮಾಡಿದರು. ಬಿಜೆಪಿ ಅಭ್ಯರ್ಥಿಗಳ ಪಟ್ಟಿ ನೋಡಿದರೆ ಅವರಿಗೆ ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ. ರಾಜ್ಯ ಸರ್ಕಾರ ಕಳೆದ 5 ವರ್ಷದಲ್ಲಿ ಶೇ.95ರಷ್ಟು ಭರವಸೆಗಳನ್ನು ಈಡೇರಿಸಿದೆ. ಬಿಜೆಪಿ ನಾಯಕರು ಅಭಿವೃದ್ಧಿ ಅಜೆಂಡಾ ಇಟ್ಟುಕೊಂಡು ಚುನಾವಣೆಗೆ
ಬರಲಿ ಎಂದರು.

ಬಿಜೆಪಿ ನಾಯಕರು ಅತಂತ್ರ ವಿಧಾನಸಭೆ ನಿರ್ಮಾಣವಾಗುತ್ತದೆಂಬ ವಿಶ್ವಾಸದಲ್ಲಿದ್ದಾರೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್‌ 130 ಸ್ಥಾನಗಳನ್ನು ಗೆಲ್ಲಲಿದೆ. ಕೆಲವು ಸಮೀಕ್ಷೆಗಳು ಕಾಂಗ್ರೆಸ್‌ ಪರ ಬಂದಿದ್ದರೆ, ಕೆಲವು ಸಮೀಕ್ಷೆಗಳಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಲಿದೆ ಎಂದು ಬಂದಿದೆ. ನಾನು ಸಮೀಕ್ಷೆಗಳನ್ನು ನಂಬುವುದಿಲ್ಲ. ಜನರ ಭಾವನೆಗಳನ್ನು ಅರಿತಿದ್ದೇನೆ. ರಾಜ್ಯದ ಜನತೆ
ಕಾಂಗ್ರೆಸ್‌ ಪರವಾಗಿದ್ದಾರೆ ಎಂದರು.

ಸಿಎಂ ಸಿದ್ದರಾಮಯ್ಯ ಮಾತನಾಡಿ, ಜಗತ್ತಿನ ತಂತ್ರಜ್ಞಾನದೊಂದಿಗೆ ಭಾರತ ಪೈಪೋಟಿ ನಡೆಸಲು ಕಾಂಗ್ರೆಸ್‌ ಕಾರಣವಾ ಗಿದೆ. ಸರ್ಕಾರ 5 ವರ್ಷದಲ್ಲಿ ಜನತೆಯ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿದೆ. ಜನರಿಗೆ ಸುಳ್ಳು ಹೇಳಿ ಆಶೀರ್ವಾದ ಪಡೆಯುತ್ತೇವೆ ಎಂದುಕೊಂಡರೆ ನಾವುಮೂರ್ಖರಾಗುತ್ತೇವೆ. ಬಿಜೆಪಿಯ ಅಮಿತ್‌ ಶಾ, ಯಡಿಯೂರಪ್ಪ, ಪ್ರಧಾನಿ ಮೋದಿ ಬರೀ ಸುಳ್ಳು ಹೇಳುತ್ತಾರೆ.
ಯಾಕೆಂದರೆ ಕೇಂದ್ರ ಸರ್ಕಾರ ಯಾವುದೇ ಅಭಿವೃದಿಟಛಿ ಕೆಲಸ ಮಾಡಿಲ್ಲ. ಅವರು ಜೈಲಿಗೆ ಹೋಗಿ ಬಂದಿದ್ದೇವೆಂದು ಸತ್ಯ ಹೇಳುವುದಿಲ್ಲ ಎಂದು ಟೀಕಿಸಿದರು.

ಏನಿದು ಸಿಎಂ ಟಾಕ್ಸ್‌ ಆ್ಯಪ್‌?: ಸಿಎಂ
ಟಾಕ್ಸ್‌ ಆ್ಯಪ್‌ನ್ನು ಪ್ಲೆ ಸ್ಟೋರ್‌ನಿಂದ ಡೌನ್‌ ಲೋಡ್‌ ಮಾಡಿಕೊಂಡು, ಸಿಎಂ ಸಿದ್ದರಾಮಯ್ಯ ಭಾವಚಿತ್ರದ ಮೇಲೆ
ಮೊಬೈಲ್‌ ಫೋಟೊ ತೆಗೆಯುವ ರೀತಿಯಲ್ಲಿ ಹಿಡಿದರೆ, ಅದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡುವ ವಿಡಿಯೋ ಬರುತ್ತದೆ. ಅಲ್ಲದೇ ಮುಖ್ಯಮಂತ್ರಿ ನಮ್ಮ ಪಕ್ಕದಲ್ಲಿಯೇ ನಿಂತು ಮಾತನಾಡುತ್ತಿದ್ದಾರೆ ಎಂಬಂತೆ ಭಾಸವಾಗುತ್ತದೆ.

-ಉದಯವಾಣಿ

Comments are closed.