ಕರ್ನಾಟಕ

ಕೈ ಬಿಟ್ಟ ರೇವಣ ಸಿದ್ದಯ್ಯ; ಸಿದ್ದರಾಮಯ್ಯ ! ‘ಸಿದ್ದರಾಮಯ್ಯ ನನ್ನನ್ನು ಸಾಕು ಪ್ರಾಣಿ ರೀತಿ ನಡೆಸಿಕೊಂಡರು’

Pinterest LinkedIn Tumblr

ಮೈಸೂರು: ಕಾಂಗ್ರೆಸ್‌ನ ಹಿರಿಯ ಮುಖಂಡ ಎಲ್. ರೇವಣ ಸಿದ್ದಯ್ಯ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ವಚನ ಭ್ರಷ್ಟರು. ನನಗೆ ಟಿಕೆಟ್‌ ಕೊಡ್ತೀನಿ ಅಂತಾ ಹೇಳಿ ಮಾತು ತಪ್ಪಿದ್ದಾರೆ. ವರುಣ ಕ್ಷೇತ್ರ ನಿಮಗೆ ಅನುವಂಶೀಯವಾಗಿ ಬಂದಿದೆಯೇ ಎಂದು ಪ್ರಶ್ನಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಚಿಯಲ್ಲಿ ಮಾತನಾಡಿದ ಅವರು, ರಾಜೀನಾಮೆ ಪತ್ರವನ್ನು ಶನಿವಾರ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರಿಗೆ ಕಳುಹಿಸಿದ್ದಾಗಿ ತಿಳಿಸಿದರು.

ಯಾವುದೇ ಪಕ್ಷವನ್ನೂ ಸೇರುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪುತ್ರನನ್ನು ಸೋಲಿಸುವುದೇ ನನ್ನ ಗುರಿ ಎಂದು ಅವರು ಹೇಳಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡ ಅವರನ್ನು ಬೆಂಬಲಿಸುತ್ತೇನೆ. ವರುಣಾದಲ್ಲಿ ಯಾರನ್ನು ಬೆಂಬಲಿಸಬೇಕು ಎಂಬುದನ್ನು ಶೀಘ್ರದಲ್ಲಿ ನಿರ್ಧರಿಸುವುದಾಗಿ ರೇವಣ ಸಿದ್ದಯ್ಯ ತಿಳಿಸಿದರು.

ಸಿದ್ದರಾಮಯ್ಯ ನನ್ನನ್ನು ಸಾಕು ಪ್ರಾಣಿ ರೀತಿ ನಡೆಸಿಕೊಂಡರು. ಚುನಾವಣೆ ಹೊಸ್ತಿಲಲ್ಲಿ ಸಿದ್ದರಾಮಯ್ಯ ನಮ್ಮ ಮನೆಗೆ‌ ಬಂದಿದ್ದರು. ನಮ್ಮ ಮನೆಯ ಸಾಕು ಪ್ರಾಣಿಗಳನ್ನು ನಾವು ಏನಾದರೂ ಕೊಟ್ಟು ಸಮಾಧಾನ ಮಾಡುತ್ತೇವೆ. ಸಿದ್ದರಾಮಯ್ಯ ಅದೇ ರೀತಿ ನನ್ನನ್ನು ನಡೆಸಿಕೊಂಡರು. ಸಾರ್ವಜನಿಕವಾಗಿ ನನ್ನನ್ನು ಹೀಯಾಳಿಸಿದರು ಎಂದು ಆರೋಪಿಸಿದ್ದಾರೆ.

Comments are closed.