ಕರ್ನಾಟಕ

ಹೈಕಮಾಂಡ್ ನಿರ್ಧಾರಕ್ಕೆ ಬದ್ದ: ಸಿದ್ದರಾಮಯ್ಯ

Pinterest LinkedIn Tumblr


ಮೈಸೂರು: ಬಾದಾಮಿಯಲ್ಲಿ ಸ್ಪರ್ಧೆ ಮಾಡೋದಕ್ಕೆ ಹೈ ಕಮಾಂಡ್ ತೀರ್ಮಾನವೇ ಅಂತಿಮ ಎಂದು ಮುಖ್ಯಮಂತ್ರಿ ಸಿದ್ದರಾ ಮಯ್ಯ ತಿಳಿಸಿದರು.

ವರುಣಾ ಕ್ಷೇತ್ರದ ಪುತ್ರ ಪರ ಪ್ರಚಾರ ಮಾಡುವ ಮುನ್ನ ಮೈಸೂರಿನ ತಮ್ಮ ನಿವಾಸ ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯನವರು, ಬಾದಾಮಿ ಸ್ಪರ್ಧೆ ಬಗ್ಗೆ ಇನ್ನು ಅಂತಿಮವಾಗಿಲ್ಲ. ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದನಾಗಿದ್ದೇನೆ. ಇದೇ 23ರಂದು ಅಂತಿಮ ನಿರ್ಧಾರ ಹೊರ ಬೀಳಲಿದೆ.

26 ರಿಂದ ರಾಜ್ಯ ಪ್ರವಾಸ ಮಾಡಲಿದ್ದೇವೆ. ಈಗಾಗಲೇ, ಪ್ರಚಾರ ಮಾಡದೇ ಇರುವ 150 ಕ್ಷೇತ್ರಗಳಿಗೆ ಪಕ್ಷದ ಬಲವರ್ಧನೆಗಾಗಿ ಮತ ಯಾಚನೆ ಮಾಡಲಿದ್ದೇವೆ. 23 ಅಥವಾ 24ರಂದು ಚುನಾವಣಾ ಪ್ರಣಾಳಿಕೆಯನ್ನು ವೀರಪ್ಪ ಮೊಯ್ಲಿ ಬಿಡುಗಡೆಗೊಳಿಸಲಿದ್ದಾರೆ. ಹಂಚಿಕೆಯಾಗದ ಏಳು ಸ್ಥಾನಗಳಿಗೆ ಶೀಘ್ರದಲ್ಲಿ ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ನಾನು ಹೈಕಮಾಂಡ್ ಅಲ್ಲ, ನಾನು ಈ ರಾಜ್ಯದ ಮುಖ್ಯ ಮಂತ್ರಿ ಎಂದು ತಿಳಿಸಿದರು.

Comments are closed.