ಕರ್ನಾಟಕ

ಬಳ್ಳಾರಿಯಲ್ಲಿ ಅಪಘಾತ: ವೈದ್ಯ ಸೇರಿ ಕುಟುಂಬದ ನಾಲ್ವರ ದುರ್ಮರಣ

Pinterest LinkedIn Tumblr


ಬಳ್ಳಾರಿ: ಸೋಮಸಮುದ್ರ ಬಳಿ ಶುಕ್ರವಾರ ಬೆಳಗ್ಗೆ ಸ್ವಿಫ್ಟ್ ಕಾರೊಂದು ರಸ್ತೆ ಬದಿಯ ತಡೆಗೋಡೆಗೆ ಢಿಕ್ಕಿಯಾದ ಪರಿಣಾಮ ಬೀದರ್‌ನ ಭಾಲ್ಕಿ ಮೂಲದ ವೈದ್ಯ ಮತ್ತು ಕುಟುಂಬದ ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತರು ವೈದ್ಯ ಸಂತೋಷ್‌ (35),ಪತ್ನಿ ಅರ್ಚನಾ(28) ಪುತ್ರಿ ಲಕ್ಷ್ಮೀ(5) ಮತ್ತು ಸಂಬಂಧಿ ಸಿದ್ರಾಮಪ್ಪ(45) ಎಂದು ತಿಳಿದು ಬಂದಿದೆ.

ಇಬ್ಬರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುರುಗೋಡು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

-ಉದಯವಾಣಿ

Comments are closed.