ಕರ್ನಾಟಕ

ಚಿಕ್ಕಮಗಳೂರು: ಕಲ್ಲಿನಿಂದ ಜಜ್ಜಿ ವಿದ್ಯಾರ್ಥಿನಿ ಕೊಲೆ

Pinterest LinkedIn Tumblr


ಚಿಕ್ಕಮಗಳೂರು: ಆರನೇ ತರಗತಿಯಲ್ಲಿ ಓದುತ್ತಿದ್ದ 12 ವರ್ಷದ ಬಾಲಕಿಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಘಟನೆ ಕೊಪ್ಪ ತಾಲೂಕಿನ ಕೆಸಗೋಡು ಗ್ರಾಮದ ಬಳಿ ಶನಿವಾರ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಸುಮುಖ (18) ಎಂಬ ಯುವಕನನ್ನು ಹರಿಹರಪುರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಾಲಕಿ ಕೆಳಕೊಪ್ಪದಿಂದ ಶಾಲೆ ಮುಗಿಸಿ ಮಧ್ಯಾಹ್ನ ಬರುತ್ತಿದ್ದಾಗ ಈ ಘಟನೆ ನಡೆದಿದೆ. ಆರೋಪಿ ಯುವಕ ಅತ್ಯಾಚಾರಕ್ಕೆ ಯತ್ನಿಸಿ, ಬಾಲಕಿ ಪ್ರತಿಭಟಿಸಿದಾಗ ಈ ಕೃತ್ಯ ನಡೆಸಿರಬಹುದೆಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

Comments are closed.