ಕರ್ನಾಟಕ

ಮುನಿರತ್ನ ವಿರುದ್ಧ ಕಣಕ್ಕಿಳಿಯುತ್ತೇನೆ: ಹುಚ್ಚ ವೆಂಕಟ್‌

Pinterest LinkedIn Tumblr


ಬೆಂಗಳೂರು: ಕಾಂಗ್ರೆಸ್‌ ಶಾಸಕ ಮುನಿರತ್ನ ವಿರುದ್ಧ ಸಮರ ಸಾರಿರುವ ನಟ,ನಿರ್ದೇಶಕ ಹುಚ್ಚ ವೆಂಕಟ್‌ ಸ್ಪರ್ಧೆಗಿಳಿಯುವುದಾಗಿ ತಿಳಿಸಿದರು.

ಪ್ರಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವೆಂಕಟ್‌ ‘ಮುನಿರತ್ನ ಕ್ಷೇತ್ರದಲ್ಲಿ ಅಕ್ರಮಗಳನ್ನು ಮಾಡುತ್ತಿದ್ದು ಅವರ ವಿರುದ್ಧ ಪಕ್ಷೇತರನಾಗಿ ಕಣಕ್ಕಿಳಿಯುತ್ತೇನೆ’ ಎಂದಿದ್ದಾರೆ.

ಎಂದಿನ ಶೈಲಿಯಲ್ಲಿ ಡೈಲಾಗ್‌ಗಳನ್ನು ಹೇಳಿದ ವೆಂಕಟ್‌ ‘ಮುಂದೆ ನಾನು ಪ್ರಧಾನಿ ಆಗಿ ಜನರನ್ನು ಬದಲಾವಣೆ ಮಾಡುತ್ತೇನೆ, ಆ ಬಳಿಕ ದೇಶ ಬದಲಾವಣೆ ಮಾಡುತ್ತೇನೆ’ ಎಂದರು.

‘ನಾನು ಮಾಡಿದಂತೆ ಚುನಾವಣಾ ಪ್ರಚಾರ ಯಾರಿಗೂ ಮಾಡಲು ಸಾಧ್ಯವಿಲ್ಲ. ಮೋದಿ, ಒಬಾಮಾ ರಿಂದಲೂ ನನ್ನ ರೀತಿ ಪ್ರಚಾರ ಮಾಡುವುದು ಅಸಾಧ್ಯ’ ಎಂದರು.

‘ಮುನಿರತ್ನ ನನಗೆ ಲಂಚಕೊಟ್ಟು ನನ್ನ ಜೊತೆ ಸೇರಿಕೊ ಎಂದು ಆಫ‌ರ್‌ ನೀಡಿದ್ದರು’ ಎಂದು ವೆಂಕಟ್‌ ಆರೋಪಿಸಿದ್ದಾರೆ.

-ಉದಯವಾಣಿ

Comments are closed.