ಕರ್ನಾಟಕ

ನಗರದಲ್ಲಿ ಮಿಲನ್‌ ಬಂಜೆತನ ನಿವಾರಣೆ ಕೇಂದ್ರ ಉದ್ಘಾಟನೆ

Pinterest LinkedIn Tumblr


ಬೆಂಗಳೂರು: ನಗರದ ಹೊರವಲಯದ ಕುಂದಲಹಳ್ಳಿಯಲ್ಲಿ ಸ್ಥಾಪಿಸಿದ “ಮಿಲನ್‌’ ಹೆಸರಿನ ಬಂಜೆತನ ನಿವಾರಣಾ ವೈದ್ಯಕೀಯ ಕೇಂದ್ರವನ್ನು ಸಂಸ್ಥೆಯ ಮುಖ್ಯಸ್ಥೆ ಡಾ.ಕಾಮಿನಿ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಆಧುನಿಕ ಜೀವನಶೈಲಿ, ಕೆಲಸದೊತ್ತಡ, ಆಹಾರ ಪದ್ಧತಿಯಿಂದ ಹಲವು ದೈಹಿಕ ಬದಲಾವಣೆಗಳುಂಟಾಗಿ ನಾನಾ ರೀತಿ ಸಮಸ್ಯೆಗಳಿಗೆ ಸಿಲುಕುವಂತಾಗಿದೆ. ಈಚೆಗೆ ಐಟಿ, ಬಿಟಿ ಹಾಗೂ ಇತರ ಒತ್ತಡದ ಕೆಲಸ ಮಾಡುವವರಿಗೆ ದೈಹಿಕ ತೊಂದರೆಗಳ ಜತೆ ಬಂಜೆತನದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.

ಇದರಿಂದ ಸಾಕಷ್ಟು ಮಂದಿ ಬಳಲುತ್ತಿದ್ದಾರೆ. ಆದ್ದರಿಂದ ಬಂಜೆತನವನ್ನು ಕಡೆಗಣಿಸದೆ ಅದನ್ನು ಕಾಯಿಲೆ ಎಂದು ಪರಿಗಣಿಸಿ ಆರೋಗ್ಯ ವಿಮೆಗಳಲ್ಲಿ ಅಳವಡಿಸಿಕೊಳ್ಳುವ ಮೂಲಕ ಬಂಜೆತನ ನಿವಾರಣಾ ಚಿಕಿತ್ಸೆಗೆ ಆರ್ಥಿಕ ನೆರವು ಪಡೆಯುವಂತಾಗಬೇಕಿದೆ ಎಂದರು.

ಮಿಲನ್‌ ಬಂಜೆತನ ನಿವಾರಣೆಯಲ್ಲಿ ದೇಶದಲ್ಲೇ ಖ್ಯಾತಿಯಾಗಿದ್ದು, ಮಕ್ಕಳಿಲ್ಲದವರ ಮಾನಸಿಕ ಪರಿಸ್ಥಿತಿಯನ್ನು ಅಧ್ಯಯನ
ಮಾಡಿ, ಐವಿಎಫ್‌ ಚಿಕಿತ್ಸೆ ನೀಡುವ ಮೂಲಕ ಬಂಜೆತನ ನಿವಾರಣೆಗೆ ಶ್ರಮಿಸುತ್ತಿದೆ. ಬೆಂಗಳೂರು ನಗರವೊಂದರಲ್ಲೇ ಆರು ಕೇಂದ್ರಗಳನ್ನು ಹೊಂದಿದ್ದು, ದೆಹಲಿ, ಮುಂಬೈ, ಚಂಡೀಗಢ, ಅಹಮದಾಬಾದ್‌ ನಲ್ಲೂ ಕಾರ್ಯನಿರ್ವಹಿಸುತ್ತಿದೆ ಎಂದು
ವಿವರಿಸಿದರು. ಈ ಸಂದರ್ಭದಲ್ಲಿ ಎಚ್‌ಸಿಜಿ ಆಸ್ಪತ್ರೆಯ ಸಿಇಒ ಡಾ. ಬಿ.ಎಸ್‌. ಅಜಯ್‌ಕುಮಾರ್‌, ಡಾ. ಪೂಜಾ ಸಿದ್ದಾರ್ಥರಾವ್‌, ಡಾ. ಗೌತಮ್‌ ಟಿ. ಪ್ರಾಣೇಶ್‌ ಇತರರಿದ್ದರು.

-ಉದಯವಾಣಿ

Comments are closed.