ಬೆಂಗಳೂರು: ಚುನಾವಣಾ ರಣ ಕಣದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಸಾಮಾಜಿಕ ತಾಣಗಳಲ್ಲೂ ಸಮರ ನಡೆಸುತ್ತಿದ್ದಾರೆ.
ಸಿಎಂ ಮಾಡಿದ ಟ್ವೀಟ್‌ವೊಂದಕ್ಕೆ ಯಡಿಯೂರಪ್ಪ ಅವರು ದಿಟ್ಟ ತಿರುಗೇಟು ನೀಡಿದ್ದು, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರೂ ಟ್ವೀಟ್ ಮೂಲಕ ಪ್ರತಿ ಬಾಣ ಬಿಟ್ಟಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್
ಬಿಜೆಪಿಯ ಮಿಷನ್ 150 ಮಿಷನ್ 50ಗೆ ಇಳಿದು, ಈಗ ಅದು ಮಿಷನ್ 1+1ಗೆ ಬಂದು ತಲುಪಿದೆ.ಇಡೀ ರಾಜ್ಯ ಸೋತರೂ ಅವರಿಗೆ ಚಾಮುಂಡೇಶ್ವರಿ ಮತ್ತು ವರುಣಾ ಕ್ಷೇತ್ರಗಳಲ್ಲಿ ಗೆಲ್ಲಬೇಕಂತೆ. ಸೋಲನ್ನು ಅವರೇ ಒಪ್ಪಿಕೊಂಡ ನಂತರ ಹೇಳ್ಳೋದೇನಿದೆ. ಗುಡ್ ಲಕ್.
ಪ್ರತಿಯಾಗಿ ಯಡಿಯೂರಪ್ಪ ಟ್ವೀಟ್
ಮುಖ್ಯಮಂತ್ರಿಯವರೇ ನಿಮ್ಮ ಲೆಕ್ಕಾಚಾರ ತಪ್ಪಾಗಿದೆ. ಬಿಜೆಪಿಯ ಮಿಷನ್ 150 ಇಲ್ಲಿಯ ತನಕ ನಿಶ್ಚಿತವಾಗಿತ್ತು. ಈಗ ಇದಕ್ಕೆ 1+1 ಸೇರಿ, ನಮ್ಮ ಮಿಷನ್ 152ಗೆ ಏರಿದೆ. ರಾಜ್ಯದ ಜನತೆ ನಿಮಗೆ ತಕ್ಕ ಉತ್ತರ ನೀಡಲಿದ್ದಾರೆ, ಗುಡ್ ಲಕ್
ಸದಾನಂದ ಗೌಡ ಅವರ ಟ್ವೀಟ್
ಮಾನ್ಯ ಶ್ರೀ ಸಿದ್ದರಾಮಯ್ಯರವರೆ ನಿಮ್ಮಂತ ಹೋರಾಟಗಾರರು ಯುದ್ಧ ಶುರುವಾಗುವ ಮೊದಲೇ ಶಸ್ತ್ರ ತ್ಯಾಗ ಮಾಡಲು ಹೊರಟಿರುವುದು ಒಳ್ಳೆಯದಲ್ಲ . ವರುಣ ಮತ್ತು ಚಾಮುಂಡೇಶ್ವರಿ ಕ್ಷೇತ್ರವನ್ನು ಈಗಲೇ ನಿರಾಶೆಯಿಂದ ಕೈ ಚೆಲ್ಲಬೇಡಿ . ಅದೇ ರೀತಿ ನಿಮ್ಮ ವ್ಯಂಗ್ಯ ನಿಮಗೆ ತಿರುಗುಬಾಣ ವಾಗುವಾಗ ಸಮಯ ಮಿಂಚಿರುತ್ತದೆ.
Comments are closed.