ರಾಷ್ಟ್ರೀಯ

ಒಂದು ಬಾರಿ ಎರಡು ಟವೆಲ್ ಹಾಕುವವರಿಗೆ ಚುನಾವಣಾ ಆಯೋಗ ಶಾಕ್!

Pinterest LinkedIn Tumblr


ದೆಹಲಿ: ಚುನಾವಣೆಯಲ್ಲಿ ಎರಡು ಕ್ಷೇತ್ರದಿಂದ ಸ್ಪರ್ಧಿಸುವವರಿಗೆ ಶಾಕ್ ನೀಡಲು ಚುನಾವಣಾ ಆಯೋಗ ಮುಂದಾಗಿದ್ದು, ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ಇರುವ ಕಾಯಿದೆಯಲ್ಲಿ ತಿದ್ದುಪಡಿ ತರಬೇಕು ಎಂದು ಚುನಾವಣಾ ಆಯೋಗ ಸುಪ್ರಿಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ.

ಏಕಕಾಲದಲ್ಲಿ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಮತದಾರರಿಗೆ ಮೋಸ ಮಾಡಿದಂತೆ, ಇದರಿಂದ ಸಾರ್ವಜನಿಕ ದುಂದು ವೆಚ್ಚ ಉಂಟಾಗುತ್ತದೆ. ಒಂದು ವೇಳೆ ಎರಡೂ ಕ್ಷೇತ್ರದಲ್ಲಿ ಗೆದ್ದರೂ ಒಂದು ಕ್ಷೇತ್ರಕ್ಕೆೆ ರಾಜಿನಾಮೆ ನೀಡಬೇಕು. ಬಳಿಕ ಆ ಕ್ಷೇತ್ರಕ್ಕೆೆ ಮತ್ತೆೆ ಚುನಾವಣೆ ನಡೆಸಬೇಕು. ಇದರಿಂದ ಸಮಯ ಹಾಗೂ ಹಣ ಎರಡೂ ವೆಚ್ಚವಾಗುತ್ತದೆ ಎಂದು ಅಫಿಡವಿಟ್‌ನಲ್ಲಿ ಚುನಾವಣಾ ಆಯೋಗ ಸುಪ್ರಿಂ ಗೆ ತಿಳಿಸಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಚುನಾವಣ ಕಣ ರಂಗೇರುತ್ತಿದ್ದು ಹಲವಾರು ನಾಯಕರು ಎರೆಡೆರಡು ಕ್ಷೇತ್ರಗಳಲ್ಲಿ ತಮ್ಮ ಅದೃಷ್ಟ ಪರೀಕ್ಷೆೆ ಮಾಡಲು ಮುಂದಾಗಿದ್ದರು. ನಿನ್ನೆೆಯಷ್ಟೇ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಚೆನ್ನಪಟ್ಟಣ ಹಾಗೂ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದರು. ಒಂದು ವೇಳೆ ಚುನಾವಣಾ ಆಯೋಗದ ಅಫಿಡವಿಟ್‌ನ್ನು ಸುಪ್ರಿಂ ಕೋರ್ಟ್ ಮನ್ನಿಸಿದರೆ, ಎರೆಡೆರಡು ಕ್ಷೇತ್ರಗಳಲ್ಲಿ ಟವೆಲ್ ಹಾಕುವವರಿಗೆ ಹಿನ್ನಡೆಯಾಗಲಿದೆ.

Comments are closed.