ಕರ್ನಾಟಕ

ಬೆಂಗಳೂರಿನಲ್ಲಿ ಸೈನಿಕನ ಕೊಂದು ಶವ ಸುಟ್ಟ ಸಿಪಾಯಿಗಳು! ಹತ್ಯೆ ರಹಸ್ಯ ಬಯಲು…

Pinterest LinkedIn Tumblr

ಹತ್ಯೆಗೀಡಾದ ಯೋಧ ಪಂಕಜ್ ಹಾಗೂ ಆರೋಪಿಗಳು

ಬೆಂಗಳೂರು: ವೈಯಕ್ತಿಕ ದ್ವೇಷ ಹಿನ್ನಲೆಯಲ್ಲಿ ಯೋಧನನ್ನೇ ಮತ್ತಿಬ್ಬರು ಸಿಪಾಯಿಗಳು ಹತ್ಯೆ ಮಾಡಿ ಬಳಿಕ ಮೃತದೇಹವನ್ನು ಸುಟ್ಟು ಹಾಕಿರುವ ಘಟನೆ ಹಳೇ ವಿಮಾನ ನಿಲ್ಧಾಣದ ಬಳಿ ಇರುವ ಸೇನೆಗೆ ಸೇರಿದ ಎಎಸ್’ಸಿ ಸೆಂಟರ್ ಆ್ಯಂಡ್ ಕಾಲೇಜು ಕ್ಯಾಂಪಸ್ ನಲ್ಲಿ ನಡೆದಿದೆ.

ಮಾ.23 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿದೆ ಬಂದಿದೆ. ಉತ್ತರ ಪ್ರದೇಶ ಮೂಲದ ಪಂಕಜ್ ಕುಮಾರ್ (26) ಹತ್ಯೆಗೀಡಾದ ಯೋಧರಾಗಿದ್ದಾರೆ.

ಹತ್ಯೆ ಪ್ರಕರಣ ಸಂಬಂಧ ಆರೋಪಿಗಳಾದ ಆಂಧ್ರಪ್ರದೇಶ ಮೂಲದ ಸಿಪಾಯಿ ಮುರಳಿ ಕೃಷ್ಣ (32) ಮತ್ತು ಜೂನಿಯರ್ ಸಿಪಾಯಿ ಧನರಾಜ್ (25) ಎಂಬುವವರನ್ನು ವಿವೇಕನಗರ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಕೊಲೆಯಾದ ಪಂಕಜ್ ಮತ್ತು ಆರೋಪಿ ಮುರಳಿ ಎಎಸ್’ಸಿ ಸೆಂಟರ್ ನಲ್ಲಿ ಡ್ರೀಲ್ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. 15 ವರ್ಷಗಳಿಂದ ಮುರಳಿ ಸಿಪಾಯಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಮೃತ ಪಂಕಜ್ ಗಿಂತ ಕರ್ತವ್ಯದಲ್ಲಿ ಹಿರಿಯನಾಗಿದ್ದ. ಕ್ಷುಲ್ಲಕ ಕಾರಣಕ್ಕೆ ಸೇನೆಯಲ್ಲಿ ಮುರಳಿ ಮತ್ತು ಪಂಕಜ್ ನಡುವೆ ಜಗಳ ನಡೆಗು ಮನಸ್ತಾಪ ಏರ್ಪಟ್ಟಿದೆ.

ಬಳಿಕ ಪಂಕಜ್ ನನ್ನು ಹತ್ಯೆ ಮಾಡಲು ನಿರ್ಧರಿಸಿದ್ದ ಮುರಳಿ, ಹತ್ಯೆಗೆ ಸಹಕರಿಸುವಂತೆ ಧನರಾಜ್ ಬಳಿ ಸಹಾಯ ಕೇಳಿದ್ದಾನೆ. ಒಂದೇ ಊರಿನವರಾಗಿದ್ದರಿಂದ ಧನರಾಜ್ ನೆರವು ನೀಡಲು ಒಪ್ಪಿದ್ದಾನೆ.

ಮಾ.23ರ ರಾತ್ರಿ 11 ಗಂಟೆ ಸುಮಾರಿಗೆ ಆರೋಪಿಗಳು ಪಂಕಜ್ ಇದ್ದ ರೂಮಿಗೆ ಹೋಗಿದ್ದಾರೆ. ಮಲಗಿದ್ದ ಪಂಕಜ್’ನ ಕುತ್ತಿಗೆಯನ್ನು ಹಗ್ಗದಿಂದ ಬಿಗಿದು ಹತ್ಯೆ ಮಾಡಿ, ಬಳಿಕ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ.

ಹತ್ಯೆ ಬಳಿಕ ಪಂಕಜ್ ಅವರ ಮೃತದೇಹವನ್ನು ಕ್ಯಾಂಪಸ್ ನ ನಿರ್ಜನ ಪ್ರದೇಶಕ್ಕೆ ಟ್ರಕ್ ನಲ್ಲಿ ಕೊಂಡೊಯ್ಯು ಗಾಲ್ಫ್ ಮೈದಾನದ ಬಳಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಬಳಿಕ ಅರ್ಧಂಬರ್ಧ ಸುಟ್ಟ ದೇಹವನ್ನು ಸೇನಾ ವಾಹನದಲ್್ಲಿ ತೆಗೆದುಕೊಂಡು ಹೋಗಿ ಸೇನಾ ಆವರಣದಲ್ಲಿನ ಕಸದ ತೊಟ್ಟಿಗೆ ಹಾಕಿ, ಅದರ ಮೇಲೆ ಕಸ ಹಾಕಿ ಬಂದಿದ್ದಾರೆ.

ನಿತ್ಯ ಬೆಳಿಗ್ಗೆ 6 ಗಂಟೆ ಸುಮಾರಿಗೆ ಯೋಧರು ಪರೇಡ್ ನಲ್ಲಿ ಪಾಲ್ಗೊಳ್ಳುತ್ತಾರೆ. ಡ್ರೀಲ್ ಇನ್ಸ್ ಪೆಕ್ಟರ್ ಆಗಿದ್ದ ಪಂಕಜ್ ಪರೇಡ್’ಗೆ ಬಂದಿರಲಿಲ್ಲ. ಸೇನೆಯ ಸುಬೇದಾರ್, ಪಂಕಜ್ ಕೊಠಡಿ ಬಳಿ ತೆರಳಿ ಪರಿಶೀಲಿಸಿದಾಗ ರಕ್ತದ ಕಲೆ ಪತ್ತೆಯಾಗಿದೆ. ಕೂಡಲೇ ಎಲ್ಲಾ ಸಿಪಾಯಿಗಳು ಪಂಕಜ್ ಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಕಸದ ತೊಟ್ಟಿ ಬಳಿ ನಾಯಿಯೊಂದು ಅರೆ-ಬರೆ ಬೆಂದ ಮೃತ ದೇಹವನ್ನು ಹೊರಗೆ ಎಳೆಯಲು ಯತ್ನ ನಡೆಸುತ್ತಿತ್ತು. ಈ ವೇಳೆ ಅನುಮಾನಗೊಂಡ ಯೋಧರು ಸ್ಥಳಕ್ಕೆ ತೆರಳಿದಾಗ ಮೃತ ದೇಹ ಪತ್ತೆಯಾಗಿದೆ. ಕೂಡಲೇ ಸೇನಾಧಿಕಾರಿಗಳು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆಂದು ತಿಳಿದುಬಂದಿದೆ.

ಪಂಕಜ್ ಹತ್ಯೆ ವೇಳೆ ಮುರಳಿ ಕೃಷಅಣ ತನ್ನ ಬಲ ತೊಡೆ ಮತ್ತು ಎರಡು ಕೈಗಳಿಗೆ ಗಾಯ ಮಾಡಿಕೊಂಡಿದ್ದ. ಕೃತ್ಯಕ್ಕೆ ಸಹಕರಿಸಿದ್ದ ಧನರಾಜ್ ನ ಕೈಗಳಿಗೂ ಗಾಯವಾಗಿತ್ತು. ಇಬ್ಬರೂ ಆರೋಪಿಗಳು ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಪಂಕಜ್ ಮೃತದೇಹ ಪತ್ತೆಯಾದ ದಿನವೇ ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರಿಂದ ಅನುಮಾನಗೊಂಡ ಸೇನಾಧಿಕಾರಿಗಳು ಇಬ್ಬರನ್ನು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಆರೋಪಿ ಮುರಳಿ ಕೃಷ್ಣ ಟ್ರಿನಿಟಿ ಸರ್ಕಲ್ ಬಳಿ ಅಪಘಾತ ಸಂಭವಿಸಿದಾಗ ಗಾಯವಾಗಿದೆ ಎಂದು ಹೇಳಿದ್ದ.

ಟ್ರಿನಿಟಿ ವೃತ್ತದ ಬಳಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅಲ್ಲಿ ಯಾವುದೇ ಅಪಘಾತ ಸಂಭವಿಸಿಲ್ಲ ಎಂಬುದು ಖಾತ್ರಿಯಾಗಿದೆ. ಇನ್ನು ಮತ್ತೊಬ್ಬ ಆರೋಪಿ ಧನರಾಜ್ ಅಡುಗೆ ಮನೆಯಲ್ಲಿ ಸ್ಟೌವ್ ಸಿಡಿದು ಗಾಯವಾಗಿದೆ ಎಂದು ಹೇಳಿಕೆ ನೀಡಿದ್ದ. ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಧನರಾಜ್ ನನ್ನು ವಶಕ್ಕೆ ಪಡೆದು, ತೀವ್ರ ವಿಚಾರಣೆ ನಡೆಸಿದಾಗ ಹತ್ಯೆ ರಹಸ್ಯ ಬಯಲಾಗಿದೆ.

Comments are closed.