ಕರ್ನಾಟಕ

ಮತದಾನ ಮಾಡಿದರೆ ಶಾಪಿಂಗ್, ಹೊಟೇಲಿನಲ್ಲಿ ಡಿಸ್ಕೌಂಟ್ ಆಫರ್

Pinterest LinkedIn Tumblr


ಬೆಂಗಳೂರು: ನಗರದಲ್ಲಿ ಮೇ.12ರಂದು ನಡೆಯುವ ವಿಧಾನಸಭೆ ಚುನಾವಣೆ ವೇಳೆ ಮತದಾನ ಹೆಚ್ಚಿಸಲು ಚುನಾವಣಾ ಆಯೋಗ ವಿಶೇಷ ಯೋಜನೆ ರೂಪಿಸುತ್ತಿದೆ. ಇದರ ಭಾಗವಾಗಿ, ಮತದಾನ ಮಾಡಿದವರಿಗೆ ಹತ್ತಿರದ ಹೊಟೆಲ್ ನಲ್ಲಿ ತಿಂಡಿ, ಮಾಲ್ ಗಳಲ್ಲಿ ಖರೀದಿ ಮೇಲೆ ರಿಯಾಯಿತಿ ನೀಡಲು ಚಿಂತನೆ‌ ನಡೆಸಿದೆ.

ಚುನಾವಣೆ ಘೋಷಣೆ ಬಳಿಕ, ಸರ್ವ ಪಕ್ಷಗಳ ಸಭೆ ನಡೆಸಿ, ಜಿಲ್ಲಾ ಚುನಾವಣಾ ಧಿಕಾರಿಯಾಗಿ ಏನೆಲ್ಲಾ ಕ್ರಮ ಕೈಗೊಳ್ಳಲಾಗಿದೆ ಎನ್ನುವ ಮಾಹಿತಿ ನೀಡಿದ್ದೇವೆ. ಮತ ಚಲಾವಣೆ ನಂತರ ಹೋಟೆಲ್, ಮಾಲ್ ಹೋದವರಿಗೆ ರಿಯಾಯಿತಿ ದರದಲ್ಲಿ ಸೇವೆ ನೀಡುವಂತೆ ಸೂಚಿಸಲಾಗಿದೆ. ಈ ಬಗ್ಗೆ ಇದೇ 30ರಂದು ಹೊಟೇಲ್ ಮಾಲೀಕರ ಜತೆ ಸಭೆ ನಡೆಸಲಾಗುವುದು ಎಂದು ಚುನಾವ ಣಾಧಿಕಾರಿ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ವಿಧಾನಸಭಾ ಕ್ಷೇತ್ರ ಆರ್.ಓ.ಗಳು ಕೆಲಸ ಆರಂಭಿಸಿದ್ದು, ಅವರ ಮಾಹಿತಿಗಳನ್ನು ಪಕ್ಷದ ಮುಖಂಡರಿಗೆ ನೀಡಲಾಗಿದೆ. ಎಲ್ಲೆಲ್ಲಿ ಶಾಸಕರ ಕಚೇರಿ ಇದೆ, ಅಲ್ಲಿರೋ ಫೋಟೋಗಳನ್ನೂ ತೆಗೆಸಲು ಸೂಚಿಸಿದ್ದು, ಇಂದು ಸಂಜೆಯೊಳಗಾಗಿ ಕೆಲಸ ಪೂರ್ಣವಾಗ ಲಿದೆ. ಅಭ್ಯರ್ಥಿ 28 ಲಕ್ಷ ಖರ್ಚು ಮಾಡಬಹುದು. ಅದರ ಬಗ್ಗೆ ಗಮನ ಇಡಲಾಗಿದೆ. ಪ್ರತೀ ಮನೆಗೂ ಓಟರ್ಸ್ ಲಿಸ್ಟ್ ಕೊಡುವ ಕೆಲಸ ಪಾಲಿಕೆಯದ್ದು, ಪಕ್ಷಗಳು ಕೊಡುವಂತಿಲ್ಲ. ಆರ್.ಆರ್.ನಗರ, ಯಶವಂತಪುರ, ಕೆ.ಆರ್.ಪುರ ವಿಧಾನಸಭಾ ಕ್ಷೇತ್ರಗಳಿಗೆ ಹೆಚ್ಚು ಗಮನ ನೀಡಲಾಗುತ್ತಿದೆ ಎಂದರು.

Comments are closed.