ಕರ್ನಾಟಕ

ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಗೆ ಅಧಿಕಾರ?: ‘ಸಿ- ಫೋರ್’ ಚುನಾವಣಾ ಪೂರ್ವ ಸಮೀಕ್ಷೆ

Pinterest LinkedIn Tumblr


ಬೆಂಗಳೂರು: ಮುಂಬರುವ ರಾಜ್ಯ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 126 ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದು, ಬಿಜೆಪಿ 70 ಹಾಗೂ ಜೆಡಿಎಸ್ 26 ಸ್ಥಾನಗಳಲ್ಲಿ ಜಯಗಳಿಸುವ ಸಾಧ್ಯತೆಯಿದೆ ಎಂದು ‘ಸಿ-ಫೋರ್’ ಸಮೀಕ್ಷೆ ಹೇಳಿದೆ.

ಮಾರ್ಚ್ 1 ರಿಂದ 25ರ ನಡುವೆ ಸಂಸ್ಥೆ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದೆ. 154 ವಿಧಾನಸಭಾ ಕ್ಷೇತ್ರಗಳಲ್ಲಿನ 22,357 ಮತದಾರರ ಸಂದರ್ಶನ ನಡೆಸಿ ಸಮೀಕ್ಷಾ ವರದಿ ಸಿದ್ಧಪಡಿಸಲಾಗಿದೆ.

ಸಂದರ್ಶನಕ್ಕೆ ಒಳಪಡಿಸಿದ ಮತದಾರರು 2,368 ಮತಗಟ್ಟೆಗಳಿಗೆ ಸೇರಿದ್ದಾರೆ. 326 ಪಟ್ಟಣ, ನಗರ ಪ್ರದೇಶ ಮತ್ತು 977 ಗ್ರಾಮೀಣ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಲಾಗಿದೆ ಎಂದು ಸಿ-ಫೋರ್ ಸಂಸ್ಥೆ ವಿವರಿಸಿದೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಶೇ 46ರಷ್ಟು ಮತಗಳನ್ನು ಪಡೆಯಲಿದೆ. ಹಿಂದಿನ ಚುನಾವಣೆಗೆ ಹೋಲಿಸಿದರೆ ಶೇ 9ರಷ್ಟು ಹೆಚ್ಚು ಮತಗಳನ್ನು ಪಡೆಯುವ ಸಾಧ್ಯತೆಯಿದೆ. ಬಿಜೆಪಿ ಮತ್ತು ಜೆಡಿಎಸ್‌ ಕ್ರಮವಾಗಿ ಶೇ 31 ಹಾಗೂ ಶೇ 16 ರಷ್ಟು ಮತಗಳನ್ನು ಪಡೆಯಲಿವೆ. ಜೆಡಿಎಸ್‌ ಮತಗಳಿಕೆ ಪ್ರಮಾಣ ಕಳೆದ ಸಲಕ್ಕಿಂತಲೂ ಶೇ 4ರಷ್ಟು ಕಡಿಮೆಯಾಗುವ ಸಂಭವವಿದೆ. ಈ ಪಕ್ಷದ ಮುಸ್ಲಿಂ, ದಲಿತ ಮತಗಳು ಕಾಂಗ್ರೆಸ್‌ ಪರ ವಾಲಬಹುದೆಂದು ಸಮೀಕ್ಷೆ ವಿವರಿಸಿದೆ.

ಸಿದ್ದರಾಮಯ್ಯ, ಯಡಿಯೂರಪ್ಪ ಇಲ್ಲವೇ ಕುಮಾರ ಸ್ವಾಮಿ ಮುಖ್ಯಮಂತ್ರಿಯಾಗಬೇಕೆಂದು ಹೆಚ್ಚಿನ ಪ್ರಮಾಣದ ಜನರು ಬಯಸಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

Comments are closed.