ಕರ್ನಾಟಕ

ನಮ್ಮ ಬೆಂಗಳೂರು ಪ್ರಶಸ್ತಿ ತಿರಸ್ಕರಿಸಿದ ಐಜಿಪಿ ರೂಪಾ ಮೌದ್ಗಿಲ್

Pinterest LinkedIn Tumblr

ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿ ಬಂಧಿಯಾಗಿರುವ ಶಶಿಕಲಾ ನಟರಾಜನ್‌ಗೆ ಸಾಕಷ್ಟು ಐಷಾರಾಮದ ಸೌಲಭ್ಯಗಳು ಸಿಗುತ್ತಿರುವ ವಿಚಾರವನ್ನು ಹಿರಂಗಪಡಿಸಿದ ನಿಷ್ಟಾವಂತ ಅಧಿಕಾರಿ, ಐಜಿಪಿ ಡಿ ರೂಪಾ ಮೌದ್ಗಿಲ್‌ ತಮಗೆ ಒಲಿದು ಬಂದ ಪ್ರಶಸ್ತಿಯೊಂದನ್ನು ತಿರಸ್ಕರಿಸಿದ್ದಾರೆ.

ಸರಕಾರೇತರ ಸಂಸ್ಥೆ, ನಮ್ಮ ಬೆಂಗಳೂರು ಪ್ರತಿಷ್ಠಾನ ನೀಡಿದ “ನಮ್ಮ ಬೆಂಗ ಳೂರು ಪ್ರಶಸ್ತಿ”ಯನ್ನು ರೂಪಾ ತಿರಸ್ಕರಿಸಿದ್ದಾರೆ. ಪ್ರಶಸ್ತಿಯೊಂದಿಗೆ ನೀಡ ಲಾಗುವ ಭಾರೀ ಮೊತ್ತದ ಹಣ ಸ್ವೀಕರಿಸಲು ತಮ್ಮ ಆತ್ಮಸಾಕ್ಷಿ ಒಪ್ಪು ತ್ತಿಲ್ಲ ಎಂದು ಸಂಸ್ಥೆಗೆ ರೂಪಾ ಪತ್ರ ಬರೆದಿದ್ದಾರೆ.

“ಪ್ರತಿಯೊಬ್ಬ ಸರಕಾರಿ ಸೇವಕನೂ ಅರೆ ರಾಜಕೀಯ ಸಂಸ್ಥೆಗಳಿಂದ ದೂರ ವಿರಬೇಕು. ಹಾಗಿದ್ದಲ್ಲಿ ಮಾತ್ರವೇ ಸಾರ್ವಜನಿಕರ ದೃಷ್ಟಿಯಲ್ಲಿ ನಾಗರಿಕ ಸೇವಕರು ಶುದ್ಧ ಹಾಗೂ ಪ್ರಾಮಾಣಿಕ ಇಮೇಜ್‌ ಕಾಪಾಡಿಕೊಳ್ಳಲು ಸಾಧ್ಯ. ಅದರಲ್ಲೂ ಚುನಾವಣೆ ಹತ್ತಿರ ಬರುತ್ತಿರುವ ಈ ಸಂದರ್ಭದಲ್ಲಿ ಇವೆಲ್ಲ ಇನ್ನಷ್ಟು ಮಹತ್ವ ಪಡೆದುಕೊಂಡಿವೆ” ಎಂದು ರೂಪಾ ಪತ್ರದಲ್ಲಿ ಬರೆದಿದ್ದಾರೆ.

ಪ್ರತಿಷ್ಠಾನವು ರೂಪಾಗೆ, “ವರ್ಷದ ಸರಕಾರೀ ಅಧಿಕಾರಿ” ಕೆಟಗರಿಯಲ್ಲಿ ಪ್ರಶಸ್ತಿ ನೀಡಲು ಆಶಿಸಿತ್ತು. ರೂಪಾ ಸೇರಿದಂತೆ ಎಂಟು ಅಧಿಕಾರಿಗಳ ಹೆಸರನ್ನು ಪ್ರಶಸ್ತಿಗೆ ಪರಿಗಣಿಸಲಾಗಿತ್ತು.

ನಾಗರಿಕ ವಸ್ತ್ರದಲ್ಲಿ ಶಶಿಕಲಾ ಸಂಬಂಧಿಕ ಇಳವರಸಿ ಅನಧಿಕೃವಾಗಿ ಪರಪ್ಪನ ಅಗ್ರಹಾರ ಪ್ರವೇಶಿಸುತ್ತಿರುವ ಕುರಿತಂತೆ ಸಂಬಂಧಿ ತ ಸಿಸಿಟಿವಿ ದೃಶ್ಯಾವಳಿಯನ್ನು ರೂಪಾ ಭ್ರಷ್ಟಾಚಾರ ನಿಗ್ರಹ ದಳಕ್ಕೆ ನೀಡಿದ್ದರು. ಅಲ್ಲದೇ 2017ರ ಫೆಬ್ರವರಿ 15ರಿಂದ ಜೈಲಿನಲ್ಲಿ ಇರುವ ಶಶಿಕಲಾರಿಗೆ ಜೈಲಿನಲ್ಲೇ ವಿಶೇಷ ಅಡುಗೆ ಮನೆ ನಿರ್ವಹಿಸುತ್ತಿದ್ದುದ್ದಾಗಿ ನಾಲ್ಕು ಪುಟಗಳ ವರದಿಯನ್ನು ರೂಪಾ ಸಲ್ಲಿಸಿದ್ದರು.

ಜೈಲಿನ ಮಹಿಳಾ ಸೆಲ್‌ ಬಳಿ ವಿಶೇಷ ಅಡುಗೆ ಮನೆಯಿದ್ದು ತಮಗೆಂದೇ ವಿಶೇಷವಾಗಿ ತಯಾರಿಸಲಾದ ಆಹಾರವನ್ನು ಶಶಿಕಲಾ ಸ್ವೀಕರಿಸುತ್ತಿದ್ದಾರೆ ಎಂದು ಹೇಳಿದ್ದ ರೂಪಾ ಛಾಪಾ ಕಾಗದದ ವಂಚಕ ಅಬ್ದುಲ್‌ ಕರೀಂ ಲಾಲಾ ತೆಲಗಿಗೂ ವಿಶೇಷ ಆತಿಥ್ಯ ನೀಡಲಾಗುತ್ತಿದೆ ಎಂದು ಆರೋಪಿಸಿದ್ದರು. ತೆಲಗಿಗೆ ಮಸಾಜ್‌ ಮಾಡಲೆಂದೇ 3-4 ಖೈದಿಗಳನ್ನು ನೇಮಕ ಮಾಡಲಾಗಿದೆ ಎಂದು ಶಶಿಕಲಾ ಇದೇ ವೇಳೆ ಆಪಾದಿಸಿದ್ದರು.

Comments are closed.