ಕರ್ನಾಟಕ

ಶರ್ಟ್, ಪ್ಯಾಂಟ್ ಬಿಚ್ಚಿ ಬೆತ್ತಲಾಗಿ ಕಾರಿನ ಮೇಲೆ ಕುಳಿತು ಪ್ರಯಾಣಿಸಿದ ಯುವಕ ! ವಿಡಿಯೋ ಮಾಡ್ದ ಸ್ನೇಹಿತ

Pinterest LinkedIn Tumblr

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಪೋಲಿಗಳ ಹಾವಳಿ ಶುರುವಾಗಿದ್ದು, ರಸ್ತೆಯಲ್ಲಿಯೇ ಕಾರಿನಲ್ಲಿ ಹೋಗುತ್ತಿದ್ದಾಗ ಯುವಕನೊಬ್ಬ ಬೆತ್ತಲಾಗಿರುವ ಘಟನೆ ನಡೆದಿದೆ.

ಶುಕ್ರವಾರ ರಾತ್ರಿ ಸುಮಾರು 12.30ರ ವೇಳೆಗೆ ಟಾಟಾ ಇಂಡಿಕಾ ಕಾರಿನಲ್ಲಿ ಮೂವರು ಯುವಕರು ರಸ್ತೆಯಲ್ಲಿಯೇ ಜನರಿಗೆ ಅಸಹ್ಯ ಆಗುವ ರೀತಿಯಲ್ಲಿ ವರ್ತಿಸಿದ್ದಾರೆ. ಯಶವಂತಪುರ ಬಳಿ ಇರುವ ಬ್ರಿಡ್ಜ್ ಮೇಲೆ ಈ ಘಟನೆ ನಡೆದಿದೆ.

ಟಾಟಾ ಇಂಡಿಕಾ ಕಾರಿನಲ್ಲಿ ಹೋಗುತ್ತಿದ್ದಾಗ ಯುವಕರಲ್ಲಿ ಒಬ್ಬ ತನ್ನ ಶರ್ಟ್ ಹಾಗು ಪ್ಯಾಂಟ್ ಬಿಚ್ಚಿ ಕಾರಿನ ಮೇಲೆ ಕುಳಿತು ಪ್ರಾಯಾಣಿಸಿದ್ದಾನೆ. ಇತರೆ ಪ್ರಯಾಣಿಕರು ಹಾಗೂ ವಾಹನ ಸವಾರರು ಮುಜುಗರಪಡುವಂತೆ ವರ್ತಿಸಿದ್ದಾನೆ. ಇನ್ನೊಬ್ಬ ಯುವಕ ತನ್ನ ಸೇಹಿತ ಮಾಡುವ ಎಲ್ಲಾ ಆಟಗಳನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾನೆ.

Comments are closed.