ಕರ್ನಾಟಕ

ಅಪಘಾತವಾಗಿ ಕೂರಲಾಗದ ಸ್ಥಿತಿಯಲ್ಲೂ ಪರೀಕ್ಷೆ ಬರೆದ ರುಮನ್‌

Pinterest LinkedIn Tumblr


ಬೆಂಗಳೂರು: ಇತ್ತೀಚೆಗೆ ಅಪಘಾತಕ್ಕೆ ಒಳಗಾಗಿ ಬೆನ್ನುಮೂಳೆ ಮತ್ತು ಕಾಲಿಗೆ ತೀವ್ರ ಗಾಯವಾಗಿ ಕುಳಿತುಕೊಳ್ಳಲು ಆಗದ ಸ್ಥಿತಿಯಲ್ಲಿರುವ ಮಲ್ಲೇಶ್ವರಂನ ಎಂಇಎಸ್‌ ಕಿಶೋರ ಕೇಂದ್ರದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ರುಮನ್‌ ಶರೀಫ್‌ ಪರೀಕ್ಷಾ ಮಂಡಳಿಯ ಅಧಿಕಾರಿಗಳ ಸಹಕಾರ ಮತ್ತು ತನ್ನ ಇಚ್ಛಾಶಕ್ತಿಯಿಂದ ಮೊದಲ ದಿನದ ಪರೀಕ್ಷೆಯನ್ನು ಯಶಸ್ವಿಯಾಗಿ ಬರೆದು ಪೂರೈಸಿದ್ದಾರೆ.

ರುಮನ್‌ ಅವರು ಕುಳಿತುಕೊಳ್ಳಲಾಗದ ಸ್ಥಿತಿ ಇರುವ ಕಾರಣ ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವಂತೆ ಪೋಷಕರು ಪರೀಕ್ಷಾ ಮಂಡಳಿಗೆ ಮನವಿ ಸಲ್ಲಿಸಿದ್ದರು.

ಸ್ಪಂದಿಸಿದ ಅಧಿಕಾರಿಗಳು ಮಲ್ಲೇಶ್ವರಂನಲ್ಲಿರುವ ಸರಕಾರಿ ಪಿಯು ಪರೀಕ್ಷಾ ಕೇಂದ್ರದಲ್ಲಿ ರುಮಲ್‌ಗೆ ಪರೀಕ್ಷೆ ಬರೆಯಲು ಅನುಕೂಲವಾಗುವ ರೀತಿ ಡೆಸ್ಕ್‌ ಸೇರಿದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದಾರೆ. ಮೊದಲ ದಿನದ ಇಂಗ್ಲೀಷ್‌ ಪರೀಕ್ಷೆ ಬರೆದಿರುವ ರುಮಲ್‌ ಮೂರು ಗಂಟೆಯೊಳಗೆ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ್ದಾರೆ.

ಮಗ ಈ ವರ್ಷ ಪರೀಕ್ಷೆ ಬರೆಯುತ್ತಾನೆ ಎಂಬ ಭರವಸೆ ಕಳೆದುಕೊಂಡಿದ್ದೆವು. ಅಧಿಕಾರಿಗಳು ಮಾನವೀಯತೆಯಿಂದ ವಿಶೇಷ ಸೌಲಭ್ಯ ಕಲ್ಪಿಸಿ ಸಹಕರಿಸಿದರು,’ ಎಂದು ರುಮನ್‌ ತಾಯಿ ನೂರ್‌ ಜಹಾನ್‌

Comments are closed.