ಕರ್ನಾಟಕ

ತಂದೆಯ ಸಾವಿನ ನಡುವೆಯೂ ಪಕ್ಷ ನಿಷ್ಟೆ ಮೆರೆದ ಅಶೋಕ್​ ಪಟ್ಟಣ್​

Pinterest LinkedIn Tumblr


ಬೆಂಗಳೂರು: ಸರ್ಕಾರದ ಮುಖ್ಯ ಸಚೇತಕ ಮತ್ತು ರಾಮದುರ್ಗ ಶಾಸಕ ಅಶೋಕ್​ ಪಟ್ಟಣ್​ ಅವರು ತಂದೆಯ ಸಾವಿನ ನಡೆಯೂ ರಾಜ್ಯಸಭೆ ಚುನಾವಣೆಯಲ್ಲಿ ಮತ ಚಲಾವಣೆ ಮಾಡುವ ಮೂಲಕ ಪಕ್ಷ ನಿಷ್ಟೆ ಮೆರೆದಿದ್ದಾರೆ.

ಪಿತೃ ವಿಯೋಗದ ದುಃಖದ ನಡೆಯೂ ವಿಧಾನಸೌಧಕ್ಕೆ ಆಗಮಿಸಿದ ಅಶೋಕ್​ ಪಟ್ಟಣ್​ ಅವರು ಮತ ಚಲಾಯಿಸಿದರು. ಆ ನಂತರ ಬೆಳಗ್ಗೆ 10.45ರ ವಿಮಾನದಲ್ಲಿ ರಾಮದುರ್ಗಕ್ಕೆ ತೆರಳಿದ್ದಾರೆ.

ಮಹಾದೇವಪ್ಪ ಪಟ್ಟಣ ನಿಧನ

ರಾಮದುರ್ಗದ ಮಾಜಿ ಶಾಸಕ, ಹಿರಿಯ ಸ್ವಾತಂತ್ರ್ಯಯೋಧ, ಶತಾಯುಷಿ ಶ್ರೀ ಮಹಾದೇವಪ್ಪ ಶಿವಬಸಪ್ಪ ಪಟ್ಟಣ ಅವರು ಇಂದು ಶುಕ್ರವಾರ ಮುಂಜಾನೆ 7 ಗಂಟೆಗೆ ತಮ್ಮ 107 ನೇ ವಯಸ್ಸಿನಲ್ಲಿ ಅವರು ಕೊನೆಯುಸಿಳೆದರು. ಅವರು ಪತ್ನಿ ಹಾಗೂ ಮಾಜಿ ಶಾಸಕಿ ಶ್ರೀಮತಿ ಶಾರದಮ್ಮ ಪಟ್ಟಣ, ಪುತ್ರ ಹಾಲಿ ಶಾಸಕ ಅಶೋಕ ಪಟ್ಟಣ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

1911ರಲ್ಲಿ ಜನಿಸಿದ್ದ ಮಹಾದೇವಪ್ಪ ಪಟ್ಟಣ ಅವರು 1939 ರ ಎಪ್ರಿಲ್ ತಿಂಗಳಲ್ಲಿ ರಾಮದುರ್ಗ ಮಹಾರಾಜ ಭಾವೆ ವಿರುದ್ಧ ನಡೆದ ಕರನಿರಾಕರಣೆ ಚಳವಳಿಯ ನಾಯಕತ್ವ ವಹಿಸಿದ್ದರು. ಪಟ್ಟಣ ಅವರ ವಿರುದ್ಧ ಬ್ರಿಟಿಷ್​ ಆಡಳಿತ “ಕಂಡಲ್ಲಿ ಗುಂಡಿಕ್ಕುವ” ವಾರಂಟ್ ಹೊರಡಿಸಿತ್ತು. ಭೂಗತರಾಗಿದ್ದ ಪಟ್ಟಣ ಅವರು ಎಂಟು ವರ್ಷಗಳ ನಂತರ ರಾಮದುರ್ಗಕ್ಕೆ ಹಿಂತಿರುಗಿದ್ದರು. 1957 ರಲ್ಲಿ ಕಾಂಗ್ರೆಸ್ ವಿರುದ್ಧ ಲೋಕಸೇವಾ ಸಂಘದ ಪರವಾಗಿ ಸ್ಪರ್ಧಿಸಿ ವಿಧಾನ ಸಭೆಗೆ ಆಯ್ಕೆಯಾದ್ದರು.

Comments are closed.