ಕರ್ನಾಟಕ

ಸೋಮಣ್ಣ ಪುತ್ರ v/s ಬಿಎಸ್‌ವೈ ಪುತ್ರ

Pinterest LinkedIn Tumblr


ಬೆಂಗಳೂರು: ಹಾಸನ ಜಿಲ್ಲೆ ಅರಸೀಕೆರೆ ಕ್ಷೇತ್ರದಿಂದ ತಮ್ಮ ಪುತ್ರ ಅರುಣ್‌ ಸೋಮಣ್ಣಗೆ ಟಿಕೆಟ್‌ ಕೊಡಿಸಲು ವಿಧಾನ ಪರಿಷತ್‌ ಸದಸ್ಯ ವಿ.ಸೋಮಣ್ಣ ಅವರ ಪ್ರಯತ್ನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅಡ್ಡಿ ಬಂದಿದ್ದಾರೆಂಬ ಆರೋಪ ಕೇಳಿಬಂದಿದೆ.

ಅರಸೀಕೆರೆ ಕ್ಷೇತ್ರದಿಂದ ಟಿಕೆಟ್‌ ಕೊಡಿಸುವುದಾಗಿ ಯಡಿಯೂರಪ್ಪ ನೀಡಿದ ಭರವಸೆ ಮೇಲೆ ಅರುಣ್‌ ಸೋಮಣ್ಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಮಧ್ಯೆ ವಿಜಯೇಂದ್ರ ಅವರು ಮರಿಸ್ವಾಮಿ ಎಂಬುವರಿಗೆ ಅರಸೀಕೆರೆ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸುವಂತೆ ಸೂಚಿಸಿದ್ದು, ಕ್ಷೇತ್ರದಲ್ಲಿ ಅರುಣ್‌ ಮತ್ತು ಮರಿಸ್ವಾಮಿ ಮಧ್ಯೆ ವಿವಾದಕ್ಕೆ ಕಾರಣವಾಗಿದೆ.

ಇದರಿಂದ ಸೋಮಣ್ಣ ಮತ್ತು ಅರುಣ್‌ ಸೋಮಣ್ಣ ತೀವ್ರ ಅಸಮಾ ಧಾನಗೊಂಡಿದ್ದು, ಸಮಸ್ಯೆ ಬಗೆಹರಿಸ ದಿ ದ್ದಲ್ಲಿ ಬಿಜೆಪಿಗೆ ರಾಜೀನಾಮೆ ನೀಡುವ ಯೋಚನೆ ಮಾಡುತ್ತಿದ್ದಾರೆಂದು ತಿಳಿದುಬಂದಿದೆ.

ಪ್ರಕರಣವೇನು?: ವಿ.ಸೋಮಣ್ಣ ಹಾಸನ ಬಿಜೆಪಿ ಉಸ್ತುವಾರಿಯಾಗಿ ಕೆಲಸ ಮಾಡುತ್ತಿದ್ದು, ಪುತ್ರನನ್ನು ಅರಸೀಕೆರೆಯಿಂದ ಕಣಕ್ಕಿಳಿಸಲು ಮುಂದಾಗಿದ್ದರು. ಅದರಂತೆ ಪುತ್ರನೊಂದಿಗೆ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಇಂಗಿತವನ್ನು ಹೇಳಿಕೊಂಡಿದ್ದರು. ಇದಕ್ಕೆ ಯಡಿಯೂರಪ್ಪ ಸಹಮತ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಮರಿಸ್ವಾಮಿ ಎಂಬುವರೂ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ.ಟಿಕೆಟ್‌ ಕೊಡಿಸುವುದಾಗಿ ವಿಜಯೇಂದ್ರ ಭರವಸೆ ನೀಡಿದ್ದಾರೆ, ನಾನೇ ಬಿಜೆಪಿ ಅಭ್ಯರ್ಥಿ ಎಂದು ಹೇಳಿಕೊಂಡಿದ್ದಾರೆ. ಈ ಕುರಿತು ಸೋಮಣ್ಣ ಅವರು ವಿಜಯೇಂದ್ರ ಅವರನ್ನು ಸಂಪರ್ಕಿಸಿದಾಗ, ಮರಿಸ್ವಾಮಿ ವಿಚಾರಕ್ಕೆ ನನ್ನ ಬಳಿ ಏಕೆ ಬಂದಿದ್ದೀರಿ ಎಂದು ಪ್ರಶ್ನಿಸಿ ಹೆಚ್ಚು ಮಾತನಾಡದೆ ವಾಪಸ್‌ ಕಳುಹಿಸಿದರು ಎನ್ನ‌ಲಾಗಿದೆ.

-ಉದಯವಾಣಿ

Comments are closed.