ಕರ್ನಾಟಕ

ರಾಜಕಾರಣದಲ್ಲಿ ನನ್ನನ್ನು ಬೆಳೆಸಿದ್ದು ಯಡಿಯೂರಪ್ಪ: ಈಶ್ವರಪ್ಪ

Pinterest LinkedIn Tumblr


ಹಾವೇರಿ: ಸಿದ್ದರಾಮಯ್ಯ ಸರಕಾರ ಟೆನ್ ಪರ್ಸೆಂಟ್ ಸರಕಾರ ಅನ್ನೋ ಪ್ರಧಾನಿ ಮೋದಿಯವರ ಹೇಳಿಕೆ ಈಗ ಸತ್ಯವಾಗಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದಲ್ಲಿ ಮಾತನಾಡಿ, ಟೆನ್ ಪರ್ಸೆಂಟ್ ಸರಕಾರ ಅನ್ನೋದಕ್ಕೆ ಮೊಯ್ಲಿ ಅವರ ಹೇಳಿಕೆಯಿಂದ ದಾಖಲೆ ಸಿಕ್ಕಂತಾಗಿದೆ. ಕಾಂಗ್ರೆಸ್ಸಿನ ಹಿರಿಯ ಮುಖಂಡ ವೀರಪ್ಪ‌ ಮೊಯ್ಲಿಯವರೆ ಅದನ್ನ ಸ್ಪಷ್ಟಪಡಿಸಿದ್ದಾರೆ. ದೇವೇಗೌಡರಿಗೆ ಟೋಪಿ‌ ಹಾಕಿ ಸಿದ್ದರಾಮಯ್ಯ ಕಾಂಗ್ರೆಸ್ ಗೆ ಬಂದು ಸೇರಿಕೊಂಡರು, ಲಾಟರಿ ಹೊಡೆದು ಹೇಗೋ ಪ್ರತಿಪಕ್ಷದ ನಾಯಕ ಆಗಿದ್ದಾರೆ ಎಂದರು.

ಬಿಜೆಪಿಯವರು ಸರಕಾರದ ಬಗ್ಗೆ ಟೀಕೆ ಮಾಡಿದಾಗ ಸಿಎಂ ಬಳಸಬಾರದ ಪದ ಬಳಸಿ ಮಾತನಾಡುತ್ತಿದ್ದರು, ಈಗ ಅವರ ಪಕ್ಷದವರೆ ಹೇಳ್ತಿದ್ದಾರೆ. ಕಾಂಗ್ರೆಸ್ಸಿನ ಅದೋಗತಿಗೆ ಸಿದ್ದರಾಮಯ್ಯ ಕಾರಣ. ವೀರಪ್ಪ ಮೊಯ್ಲಿ ಅವರ ಹೇಳಿಕೆ ಬಗ್ಗೆ ತಕ್ಷಣ ಸಿಎಂ ಉತ್ತರ ಕೊಡಬೇಕು. ಮೊಯ್ಲಿ ಹೇಳಿರೋದು ಸರಿಯಿಲ್ಲ ಅಂದರೇ ಅವರ ಮೇಲಾದರೂ ಕ್ರಮ ಕೈಗೊಳ್ಳಲಿ ಎಂದರು.

ಸಿದ್ದರಾಮಯ್ಯ ಮತ್ತು ಅವರ ಮಗ ಡಾ.ಯತೀಂದ್ರ ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರಿಗೆ ದುಡ್ಡು ಕೊಟ್ಟು ಟಿಕೆಟ್ ತರೋ ಪರಿಸ್ಥಿತಿ ಬಂದಿದೆ. ಅಶೋಕ‌ ಖೇಣಿಯನ್ನ ಕಾಂಗ್ರೆಸ್ ಸೇರಿಸಿಕೊಂಡಾಗ ಮಲ್ಲಿಕಾರ್ಜುನ ಖರ್ಗೆ ನೀಡಿದ ಹೇಳಿಕೆ ಮತ್ತು ಮೊಯ್ಲಿಯವರ ಹೇಳಿಕೆ ನೋಡಿದ್ರೆ ಸಿದ್ದರಾಮಯ್ಯ ಸರಕಾರ ಭ್ರಷ್ಟ ಸರಕಾರ ಅನ್ನೋದು ಗೊತ್ತಾಗುತ್ತದೆ ಎಂದರು. ರಾಜಕಾರಣದಲ್ಲಿ ನನ್ನನ್ನು ಬೆಳೆಸಿದ್ದು ಯಡಿಯೂರಪ್ಪ. ಬಿಜೆಪಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಿದೆ ಆದ್ದರಿಂದ ಎಲ್ಲವನ್ನೂ ಕುಳಿತು ಚರ್ಚೆ ಮಾಡ್ತೇವೆ ಎಂದರು.

Comments are closed.