ಕರ್ನಾಟಕ

ಕೂಲ್‌ಡ್ರಿಂಕ್ಸ್‌ನಲ್ಲಿ ಹುಳ, ಕಸ-ಕಡ್ಡಿ, ಪ್ಲಾಸ್ಟಿಕ್‌ ಚಿತ್ತಾರ!

Pinterest LinkedIn Tumblr


ವಿಜಯಪುರ: ಬೇಸಿಗೆ ಕಾಲದಲ್ಲಿ ಹೊಟ್ಟೆ ತಂಪು ಮಾಡಿಕೊಳ್ಳಲು ಏಕಾಏಕಿ ಕೂಲ್‌ ಡ್ರಿಂಕ್ಸ್‌ ಕುಡಿದೀರಿ ಜೋಕೆ! ಜಾಹೀರಾತುಗಳಲ್ಲಿ ಬರೋ ಪಾನೀಯಗಳು ಗುಣಮಟ್ಟದೊಂದಿಗೆ ನೂರಕ್ಕೆ ನೂರು ಪುಷ್ಟಿಕರವಾಗಿರುತ್ತವೆ ಎಂಬುದನ್ನು ನಂಬಲು ಸಾಧ್ಯವಿಲ್ಲ. ಅನಾರೋಗ್ಯಕ್ಕೂ ಕಾರಣವಾಗಬಹುದು.

ಹೌದು. ಮುದ್ದೇಬಿಹಾಳ ತಾಲೂಕಿನ ತಾಳಿಕೋಟೆಯಲ್ಲಿರುವ ನಟರಾಜ್ ಹೊಟೇಲ್‌ನಲ್ಲಿ ಗ್ರಾಹಕರೊಬ್ಬರು ಸ್ಲೈಸ್ ತಂಪು ಪಾನೀಯ ಕುಡಿಯೋಕೆ ಮುಂದಾದಾಗ ಬಾಟಲಿಯಲ್ಲಿ ಹುಳುಗಳು ಪತ್ತೆಯಾಗಿವೆ. ಫ್ರಿಜ್​​ನಿಂದ ಮತ್ತೊಂದಷ್ಟು ಬಾಟಲ್​ ತೆಗೆದು ನೋಡಿದಾಗ ಅದರಲ್ಲೂ ಹುಳ, ಪ್ಲಾಸ್ಟಿಕ್, ಕಸ -ಕಡ್ಡಿ, ತುಕ್ಕು ಹಿಡಿದ ಕೆಮಿಕಲ್​ಗಳು ಪತ್ತೆಯಾಗಿವೆ.

ಬಾಟಲಿ ಮೇಲಿನ ದಿನಾಂಕವನ್ನು ಗಮನಿಸಿದರೆ ನವೆಂಬರ್​ 2017ರಲ್ಲಿ ತಯಾರಾಗಿರುವ ಬಾಟಲಿಯನ್ನು ಮುಂದಿನ ಏಪ್ರಿಲ್‌ವರೆಗೂ ಬಳಸಬಹುದು. ಆದರೆ, ಅವಧಿಗೂ ಮೊದಲೆ ಬಾಟಲಿಗಳಲ್ಲಿ ಹುಳುಗಳು ಸಿಕ್ಕಿದ್ದು, ಹೋಟೆಲ್​ ಮಾಲೀಕ ಸ್ಲೈಸ್​ ಕಂಪನಿ ವಿರುದ್ಧ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

Comments are closed.