ಕರ್ನಾಟಕ

ಮತಯಂತ್ರ ಕುರಿತು ತಪ್ಪು ಮಾಹಿತಿ ನೀಡಿದಲ್ಲಿ ಮೊಕದ್ದಮೆ: ಆಯೋಗ

Pinterest LinkedIn Tumblr


ಬೆಂಗಳೂರು: ಈ ಬಾರಿಯ ರಾಜ್ಯ ವಿಧಾನಸಭೆ ಚುನಾವಣೆಗೆ ಒಟ್ಟು 73850 ವಿವಿಪ್ಯಾಟ್ ಗಳನ್ನ ಬಳಕೆ ಮಾಡಲಾಗುತ್ತಿದೆ. ಇವಿಎಮ್ ಮತ್ತು ವಿವಿಪ್ಯಾಟ್ ಕುರಿತು ಮಾಧ್ಯಮದಲ್ಲಿ ತಪ್ಪು ಮಾಹಿತಿ ನೀಡಿದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ್ ಎಚ್ಚರಿಸಿದ್ದಾರೆ.

56290 ಹೊಸ ವಿವಿಪ್ಯಾಟ್ ಗಳನ್ನು ಬಿಇಎಲ್ ನಿಂದ ತರಲಾಗಿದೆ. ಇನ್ನುಳಿದ 17580 ವಿವಿಪ್ಯಾಟ್ ಗಳನ್ನ ಬಿಇಎಲ್ ಮತ್ತು ಗುಜರಾತ್ ನಿಂದ ತರಿಸಲಾಗು ತ್ತದೆ. 13000 ವಿವಿಪ್ಯಾಟ್ ಗುಜರಾತ್ ನಿಂದ ಮತ್ತು 4 ಸಾವಿರ ಬಿಇಎಲ್ ನಿಂದ ತರಲಾಗುತ್ತದೆ. ಚುನಾವಣೆಗೆ ಬಿಯು(ಬ್ಯಾಲೆಟ್ ಯುನಿಟ್) 85170 ಬಿಯು 70190 ರಾಜ್ಯಕ್ಕೆ ಬಂದಿದೆ. ಸಿಯು(ಕಂಟ್ರೋಲ್ ಯುನಿಟ್) ಯುನಿಟ್ 70990 ಬೇಕು. ಅದರಲ್ಲಿ 52110 ಸಿಯು ರಾಜ್ಯಕ್ಕೆ ಬಂದಿದೆ. ಒಟ್ಟು 5 ರಾಜ್ಯದಿಂದ ಮಷಿನ್ ಗಳು ಬರುತ್ತಿವೆ ಎಂದು ವಿವರ ನೀಡಿದರು.

ವಿವಿಪ್ಯಾಟ್ ಗಳನ್ನ ಬಳಕೆ ಮಾಡುತ್ತಿರುವುದರಿಂದ ಸಿಬ್ಬಂದಿ ಹೆಚ್ಚು ಬೇಕು. ಶೇ 25 ಪ್ರತಿವರ್ಷ ಹೆಚ್ಚಿನ ಸಿಬ್ಬಂದಿ ಬೇಕಾಗುತ್ತದೆ. ಕಳೆದ ಬಾರಿ ಪೋಲಿಸ್ ರನ್ನ ಹೊರತು ಪಡಿಸಿ 2.75 ಲಕ್ಷ ಸಿಬ್ಬಂದಿಯನ್ನ ಬಳಸಲಾಗಿತ್ತು. ಆದರೆ ಈ ಬಾರಿ 3.75 ಲಕ್ಷ ಸಿಬ್ಬಂದಿ ಯನ್ನ ಬಳಸಲಾಗುತ್ತದೆ. ಇಲ್ಲಿಯವರೆಗೆ 30 ಕೋಟಿ ಹಣವನ್ನ ಖರ್ಚು ಮಾಡಲಾಗಿದೆ. ಒಂದು ಕ್ಷೇತ್ರಕ್ಕೆ 1.14 ಕೋಟಿ ಹಣದಂತೆ 224 ಕ್ಷೇತ್ರಕ್ಕೆ ಖರ್ಚಾಗಬಹುದು ಎಂದು ವಿವರಿಸಿದರು.

Comments are closed.