ಕರ್ನಾಟಕ

ಸಾಮೂಹಿಕ ವಿವಾಹ ತಾಳಿ: ಆಭರಣ ಮಳಿಗೆಗಳಿಗೆ 1.68 ಕೋಟಿ ವಂಚನೆ

Pinterest LinkedIn Tumblr


ಬೆಂಗಳೂರು: ಸಾಮೂಹಿಕ ವಿವಾಹ ಮಾಡಿಸುವ ಸೋಗಿನಲ್ಲಿ ಎರಡು ಆಭರಣ ಮಳಿಗೆಗಳಿಂದ ಸುಮಾರು 1.68 ಕೋಟಿ ರೂ. ಮೌಲ್ಯದ ತಾಳಿಗಳು ಹಾಗೂ ಚಿನ್ನದ ಬಿಸ್ಕತ್‌ ಮಾಡಿಸಿಕೊಂಡು ಹಣ ನೀಡದೆ ವಂಚಿಸಿದ ಆರೋಪದಲ್ಲಿಬಿಎಸ್‌ಆರ್‌ ಕಾಂಗ್ರೆಸ್‌ ಮುಖಂಡರಾಗಿದ್ದ ಉದ್ಯಮಿ ಎಲ್‌.ಸೋಮಣ್ಣ ಸೇರಿದಂತೆ ನಾಲ್ವರ ವಿರುದ್ಧ ಬಸವೇಶ್ವರನಗರ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ.

ಎಲ್‌.ಸೋಮಣ್ಣ, ರೇಣುಕೇಶ, ಅಂಥೋಣಿ ಹಾಗೂ ಸಾಗರ್‌ ಎಂಬುವವರ ವಿರುದ್ಧ ಬಸವೇಶ್ವರ ನಗರ ನಿವಾಸಿಗಳಾದ ಸೂರಜ್‌ ಹಾಗೂ ಡಿ.ಎನ್‌ ಧೀರಜ್‌ ದೂರು ದಾಖಲಿಸಿದ್ದಾರೆ.

ಪ್ರಕರಣದ ವಿವರ

”ಕೆಲವು ವರ್ಷಗಳಿಂದ ರೇಣುಕೇಶ್‌ ಎಂಬಾತ ನನಗೆ ಪರಿಚಯವಾಗಿದ್ದ. 2017ರ ಜುಲೈ ತಿಂಗಳಲ್ಲಿಫೋನ್‌ ಮಾಡಿ ಮಾತನಾಡಿದ ರೇಣುಕೇಶ್‌, ಸ್ನೇಹಿತ ಎಲ್‌.ಸೋಮಣ್ಣ ಎಂಬುವವರು ರಾಜಕೀಯ ಮುಖಂಡನಾಗಿದ್ದು , ಅವರ ಹುಟ್ಟುಹಬ್ಬಕ್ಕೆ ಬಟ್ಟೆ ಬೇಕಾಗಿದೆ. ನಿಮ್ಮ ಅಂಗಡಿಗೆ ಕಳುಹಿಸುತ್ತೇನೆ ಎಂದು ಹೇಳಿದ್ದ. ಅದಕ್ಕೆ ಬನ್ನಿ ಎಂದು ಹೇಳಿದಾಗ 2017ರ ಜು.18ರಂದು ಎಲ್‌.ಸೋಮಣ್ಣ ಅವರ ಪತ್ನಿ ಹಾಗೂ ಮಕ್ಕಳೆಂದು ಹೇಳಿಕೊಂಡು ಮೂವರು ಬಂದು 30 ಸಾವಿರ ರೂ. ಕೊಟ್ಟುಬಟ್ಟೆ ಖರೀದಿಸಿದ್ದರು. ಸಹಕಾರ ನಗರದಲ್ಲಿನ ಲಾಡ್ಜ್ವೊಂದರಲ್ಲಿಉಳಿದುಕೊಂಡಿದ್ದ ಎಲ್‌.ಸೋಮಣ್ಣ ಅವರನ್ನು ಭೇಟಿ ಮಾಡಿ ಅವರ ಬಟ್ಟೆಯನ್ನು ಅಲ್ಲೇ ನೀಡಿದ್ದೆ. ಅಲ್ಲದೆ, ಚಳ್ಳಕೆರೆ ಬಳಿಯ ನಾಯಕನಹಟ್ಟಿಯಲ್ಲಿಅವರ ಹುಟ್ಟುಹಬ್ಬಕ್ಕೂ ಹೋಗಿದ್ದೆ. ಹೀಗೆ, ಸಂಪರ್ಕದಲ್ಲಿದ್ದ ಅವರು, ನಿಮ್ಮ ಅಂಗಡಿ ಚಿಕ್ಕದಾಗಿದೆ. ಶೋ ರೂಮ್‌ ಮಾಡಿಕೊಳ್ಳಿ , ನಾನು ನಡೆಸುತ್ತಿರುವ ಟ್ರಸ್ಟ್‌ನಿಂದ 3.5 ಕೋಟಿ ರೂ. ಸಾಲ ಕೊಡಿಸುವೆ ಎಂದರು. ನಾಲ್ಕು ಚೆಕ್‌, ಬಾಂಡ್‌ ಪೇಪರ್‌ ಹಾಗೂ ಗುರುತಿನ ಚೀಟಿ ಕೊಡಿ ಎಂದು ಹೇಳಿ ಮನೆಗೆ ಬಂದು ಎಲ್ಲವನ್ನೂ ತೆಗೆದುಕೊಂಡು ಹೋದರು” ಎಂದು ದೂರಿನಲ್ಲಿಸೂರಜ್‌ ವಿವರಿಸಿದ್ದಾರೆ.

Comments are closed.