ಕರ್ನಾಟಕ

ಗಂಗಾವತಿಯಲ್ಲಿ ವಿದೇಶೀ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದ ಓರ್ವನ ಬಂಧನ

Pinterest LinkedIn Tumblr

ಗಂಗಾವತಿ: ವಿದೇಶೀ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದ ಕಾರಣ ವ್ಯಕ್ತಿಯೊಬ್ಬನನ್ನು ಬಂಧಿಸಿದ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ನಡೆದಿದೆ.

ಆನಂದ ರೆಡ್ಡಿ ಪುಲ್ಲಾರೆಡ್ಡಿ ಎನ್ನುವ ವ್ಯಕ್ತಿಯನ್ನು ಬಂಧಿಸಲಾಗಿದ್ದು ಹಂಪಿ, ಆನೆಗುಂದಿ ಪ್ರವಾಸಕ್ಕಾಗಿ ಬಂದಿದ್ದ ಅಮೆರಿಕಾ ಮೂಲದ ಮಹಿಳೆಗೆ ಈತ ಕಿರುಕುಳ ನೀಡಿದ್ದ ಎನ್ನಲಾಗಿದೆ.

ಗಂಗಾವತಿ ತಾಲೂಕಿನ ಹನುಮನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು ಪ್ರವಾಸಕ್ಕಾಗಿ ಬಂದ ಮಹಿಳೆ ಲಾಡ್ಜ್ ಒಂದರಲ್ಲಿ ವಾಸ್ತವ್ಯ ಹೂಡಿದ್ದಳು. ಆಕೆಗೆ ಮಸಾಜ್ ಮಾಡುವ ಉದ್ದೇಶದೊಡನೆ ಆಕೆಯ ಪರಿಚಯ ಮಾಡಿಕೊಂಡಿದ್ದ ಆರೋಪಿ ಮಶಾಜ್ ನೆವದಲ್ಲಿ ಲೈಂಗಿಕ ಕಿರುಕುಳ ನಿಡಿದ್ದಾನೆ. ಈ ಸಂಬಂಧ ವಿದೇಶೀ ಮಹಿಳೆ ಗಂಗಾವತಿಯ ಗ್ರಾಮೀಣ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಇದೀಗ ಪೋಲೀಸರು ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Comments are closed.