ಕರ್ನಾಟಕ

ಸೋಶಿಯಲ್​ ಮೀಡಿಯಾದಲ್ಲಿ ಘರ್ಜಿಸಿದ ತೆಲಂಗಾಣದ ಹುಲಿ

Pinterest LinkedIn Tumblr


ಚಿಂಚೋಳಿ: ಚಿರತೆ ಹಾವಳಿಗೆ ಭಯ ಪಡುತ್ತಿದ್ದ ಕಲಬುರಗಿ ಜಿಲ್ಲೆಯ ಜನ ಕಳೆದ ರಾತ್ರಿಯಿಂದ ಹುಲಿ ಹಾವಳಿಗೆ ಬೆಚ್ಚಿ ಬಿದ್ದಿದ್ದಾರೆ.

ಆದರೆ ಅದು ನಿಜವಾದ ಹುಲಿ ಅಲ್ಲ. ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಬಂದು ಹೋದ ಹುಲಿಯಷ್ಟೆ ಎಂದು ತಿಳಿದ ನಂತರ ಆತಂಕದಿಂದ ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ ರಾತ್ರಿ ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದ ಬಳಿಯಿರುವ ಚಂದಾಪುರ ಬಳಿ ಹುಲಿಯೊಂದು ರಸ್ತೆ ದಾಟಿಕೊಂಡು ಹೋಗಿದೆ ಎನ್ನುವ ಪೋಟೋ ಸೋಶಿಯಲ್ ಮೀಡಿಯಾಗಳಲ್ಲಿ ಹರಿ ಬಿಟ್ಟಿರುವುದೇ ಇದಕ್ಕೆಲ್ಲ ಕಾರಣ.

ಹುಲಿ ಫೋಟೊ ನೋಡಿ ಚಂದಾಪುರ ಸೇರಿದಂತೆ ಅಕ್ಕಪಕ್ಕ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿತ್ತು. ಇದೇ ಕಾರಣಕ್ಕೆ ಚಿಂಚೋಳಿ-ಚಂದಾಪುರ ರಸ್ತೆ ಕೂಡ ಬಂದ್ ಮಾಡಲಾಗಿತ್ತು. ನೆರೆಯ ತೆಲಂಗಾಣ ಪ್ರದೇಶದಲ್ಲಿ ಹುಲಿ ಕಂಡಿದೆ ಎಂಬ ವದಂತಿ ಇದಕ್ಕೆಲ್ಲ ಕಾರಣ ಎನ್ನಲಾಗುತ್ತಿದೆ.

ನಮ್ಮಲ್ಲಿ ಹುಲಿ ಇಲ್ಲ ಸ್ಪಷ್ಟನೆ

ಈ ಭಾಗದಲ್ಲಿ ಇಲ್ಲಿವರೆಗೆ ಹುಲಿ ಕಂಡಿಲ್ಲ. ಸೋಶಿಯಲ್ ಮಿಡಿಯಾದಲ್ಲಿ ಮಾತ್ರ ಯಾರೋ ಚಿತ್ರ ಹರಿಬಿಡುತ್ತಿದ್ದಾರೆ. ಬುಧವಾರ ಬೆಳಗ್ಗೆ ಹುಲಿ ಹೆಜ್ಜೆಗಳನ್ನು ಕೂಡಾ ಪರಿಶೀಲಿಸಲಾಗಿದೆ. ಆದರೆ ಯಾವುದೇ ಹೆಜ್ಜೆ ಗುರುತು ಸಿಕ್ಕಿಲ್ಲ ಎಂದು ಚಿಂಚೋಳಿ ಆರ್​ಎಫ್​ಒ ಸುನೀಲ್ ಕುಮಾರ್ ಚವ್ಹಾಣ ಸ್ಪಷ್ಟಪಡಿಸಿದ್ದಾರೆ.

Comments are closed.